ನ.5ರಂದು ಕವಿಗೋಷ್ಟಿ, ಉಪನ್ಯಾಸ, ಗೀತ ಗಾಯನ
ಉಡುಪಿ, ನ.3: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾ ಘಟಕ ಹಾಗೂ ಸುಹಾಸಂ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಸಂಭ್ರಮದ ಅಂಗವಾಗಿ ಕವಿಗೋಷ್ಟಿ, ಉಪನ್ಯಾಸ ಹಾಗೂ ಗೀತ ಗಾಯನ ಕಾರ್ಯಕ್ರಮವು ನ.5ರಂದು ಮಧ್ಯಾಹ್ನ 3ಗಂಟೆಗೆ ಹೋಟೆಲ್ ಕಿದಿಯೂರಿನ ಪವನ್ ರೂಫ್ ಟಾಪ್‌ನಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಸಾಹಿತಿ ವೈದೇಹಿ ಉದ್ಘಾಟಿಸಲಿದ್ದು, ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಲಿರುವರು. ಈ ಸಂದರ್ಭ ಕಥೆಗಾರ ಬೆಳಗೋಡು ರಮೇಶ್ ಭಟ್ ‘ಕನ್ನಡ ಬಳಸಿ ಕನ್ನಡ ಉಳಿಸಿ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿರುವರು.
ಜ್ಯೋತಿ ಗುರು ಪ್ರಸಾದ್ ಕಾರ್ಕಳ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ಗೀತ ಗಾಯನ ಕಾರ್ಯಕ್ರಮದಡಿ ಕಾರ್ಕಡ ಸುರೇಶ್ ಕನ್ನಡ ಗೀತೆಗಳನ್ನು ಹಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story





