ಕಿದ್ವಾಯಿ ಆಸ್ಪತ್ರೆಯಲ್ಲಿ ನವೆಂಬರ್ ತಿಂಗಳಾದ್ಯಂತ ಉಚಿತ ಕ್ಯಾನ್ಸರ್ ತಪಾಸಣೆ

ಬೆಂಗಳೂರು, ನ. 3: ಕ್ಯಾನ್ಸರ್ ನಿರ್ಮೂಲನಾ ಮಾಸಾಚರಣೆ ಅಂಗವಾಗಿ ನಗರದ ಕಿದ್ವಾಯಿ ಆಸ್ಪತ್ರೆಯಲ್ಲಿ ನವೆಂಬರ್ ತಿಂಗಳ ಪೂರ್ತಿ ಉಚಿತ ಕ್ಯಾನ್ಸರ್ ತಪಾಸಣೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ರಾಮಚಂದ್ರ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗರ್ಭಕೋಶ, ಕಂಠ ಕ್ಯಾನ್ಸರ್ ಅನ್ನು ಆರಂಭದಲ್ಲೇ ಗುರುತಿಸಿದರೆ ಗುಣಪಡಿಸಲು ಸಾಧ್ಯವಿದೆ. ವಿವಿಧ ಹಂತಗಳಲ್ಲಿ ಕ್ಯಾನ್ಸರ್ ಹರಡಲಿದ್ದು, ನಾಲ್ಕನೆ ಹಂತ ತಲುಪಿದರೆ ಗುಣಪಡಿಸಲು ಸಾಧ್ಯವಾಗದೆ ಗರ್ಭಕೋಶ ತೆಗೆಯುವುದು ಅನಿವಾರ್ಯವಾಗುತ್ತದೆ. ಇದಕ್ಕಾಗಿ ಆರಂಭದಲ್ಲೇ ಇದನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಅಗತ್ಯವಿದೆ ಎಂದು ಹೇಳಿದರು.
ಇಂದು ಕ್ಯಾನ್ಸರ್ ದಿನಾಚರಣೆಯಾಗಿದ್ದು, ಕಿದ್ವಾಯಿ ಸಂಸ್ಥೆ ನಿನ್ನೆಯಿಂದಲೇ ತಪಾಸಣಾ ಕಾರ್ಯ ಆರಂಭಿಸಿದೆ. ಬೆಳಗ್ಗೆ 9ರಿಂದ ಸಂಜೆ 4ಗಂಟೆಯವರೆಗೂ ಯಾರು ಬೇಕಾದರೂ ಬಂದು ಉಚಿತವಾಗಿ ತಪಾಸಣಾ ಸೌಲಭ್ಯ ಪಡೆಯಬಹುದು ಎಂದರು.
Next Story





