ಹಲ್ಲೆ ಪ್ರಕರಣ: ಜಾಮೀನು ಅರ್ಜಿ ಮುಂದೂಡಿಕೆ
ಪುತ್ತೂರು, ನ. 3: ಸುಬ್ರಹ್ಮಣ್ಯದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರ ಕುಂದಾಪುರ ಮತ್ತು ಗುರುಪ್ರಸಾದ್ ತಂಡ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯನ್ನು ಕೈಗೆತ್ತಿಕೊಂಡ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಜಾಮೀನು ಅರ್ಜಿಯ ತೀರ್ಪನ್ನು ನ.5ಕ್ಕೆ ಮುಂದೂಡಿದೆ.
ಚೈತ್ರಾ ಕುಂದಾಪುರ ಮತ್ತು ಅವರ ಸಂಗಡಿಗರಾದ ಹರೀಶ್ ನಾಯಕ್, ಸುದಿನ ಪೂಜಾರಿ, ಹರೀಶ್ ಖಾರ್ವಿ, ನಿಖಿಲ್,ವಿನಯ ಮತ್ತು ಮಣಿಕಂಠ ಅವರ ಪರವಾಗಿ ವಕೀಲ ಮಹೇಶ್ ಕಜೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಚೈತ್ರ ಕುಂದಾಪುರ ಅವರು ನೀಡಿದ ದೂರಿನಲ್ಲಿ ಆರೋಪಿತರಾದ ಆಶಿತ್ ಕಲ್ಲಾಜೆ, ತೀರ್ಥರಾಮ, ದುಷ್ಯಂತ ಗೌಡ, ಕಿಶೋರ್ ಶಿರಾಡಿ ಅವರಿಗೆ ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ನ್ಯಾಯವಾದಿ ವೆಂಕಪ್ಪ ಗೌಡರು ಅರ್ಜಿ ಸಲ್ಲಿಸಿದ್ದರು.
ಪ್ರಾಸಿಕ್ಯೂಷನ್ ಪರ ವಾದ ಮಂಡಿಸಿದ ಸರ್ಕಾರಿ ಅಭಿಯೋಜಕರು ಆಕ್ಷೇಪ ವ್ಯಕ್ತ ಪಡಿಸಿದ್ದರು. ವಾದವನ್ನು ಆಲಿಸಿದ ನ್ಯಾಯಾಧೀಶ ಶಿವಣ್ಣ ಅವರು ನ.5ಕ್ಕೆ ಜಾಮೀನು ಅರ್ಜಿಯ ತೀರ್ಪನ್ನು ಮುಂದೂಡಿದರು.
Next Story





