ಮೈಸೂರು ವಿಭಾಗಕ್ಕೆ ಚಾಂಪಿಯನ್ ಪಟ್ಟ, ನಂದನ್, ಶ್ರುತಿ ಉತ್ತಮ ಆಟಗಾರರು
ಅಳಿಯೂರಿನಲ್ಲಿ ರಾಜ್ಯಮಟ್ಟದ ಬಾಲ್‍ಬ್ಯಾಡ್ಮಿಂಟನ್

ಮೂಡುಬಿದಿರೆ, ನ. 3: ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾ„ಕಾರಿ ಕಚೇರಿ ಮತ್ತು ಅಳಿಯೂರು ಸರಕಾರಿ ಪ್ರೌಢಶಾಲೆ ಇವುಗಳ ಸಹಭಾಗಿತ್ವದಲ್ಲಿ ಎರಡು ದಿನಗಳ ಕಾಲ ಅಳಿಯೂರು ಸರಕಾರಿ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಪ್ರೌಢಶಾಲಾ ಬಾಲಕರು ಮತ್ತು ಬಾಲಕಿಯರ ವಿಭಾಗದ ಬಾಲ್‍ಬ್ಯಾಡ್ಮಿಂಟನ್ ಪಂದ್ಯಾಟದ ಎರಡೂ ವಿಭಾಗದಲ್ಲಿ ಮೈಸೂರು ವಿಭಾಗವು ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ.
ಬಾಲಕರಲ್ಲಿ ಬೆಳಗಾವಿ ವಿಭಾಗ, ಬಾಲಕಿಯರಲ್ಲಿ ಬೆಂಗಳೂರು ವಿಭಾಗ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದು, ತೃತೀಯ ಸ್ಥಾನವನ್ನು ಕ್ರಮವಾಗಿ ಕಲ್ಬುರ್ಗಿ ಹಾಗೂ ಬೆಳಗಾವಿ ತಂಡಗಳು ಗಳಿಸಿಕೊಂಡಿವೆ. ಉತ್ತಮ ಆಟಗಾರರಾಗಿ ಮೈಸೂರು ವಿಭಾಗದ ನಂದನ್ ಮತ್ತು ಶ್ರುತಿ ಹೊರಹೊಮ್ಮಿದ್ದಾರೆ.
ಶನಿವಾರ ಕೊನೆಗೊಂಡ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮೂಡಬಿದಿರೆ ಕ್ಷೇತ್ರ ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಗಣ್ಯರು ಪಾಲ್ಗೊಂಡು ಪ್ರಶಸ್ತಿ ವಿತರಿಸಿದರು.
ಸನ್ಮಾನ : ಅಂತಾರಾಷ್ಟ್ರೀಯ ಕ್ರೀಡಾಳುಗಳಾದ ಸಿಲ್ವಿನಾ ಪಾಯಸ್, ಜೋಯ್ಲಿನ್ ಲೋಬೋ, ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿ ಪುರಸ್ಕೃತರಾದ ಉಲ್ಲಾಸ್, ಜಯಲಕ್ಷ್ಮೀ ಅವರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು.
ಜಿ.ಪಂ. ಸದಸ್ಯರಾದ ಸುಜಾತಾ ಕೆ.ಪಿ. ಶಿರ್ತಾಡಿ, ಕೆ. ಪಿ. ಸುಚರಿತ ಶೆಟ್ಟಿ , ತಾ.ಪಂ. ಸದಸ್ಯರಾದ ನಾಗವೇಣಿ ಮತ್ತು ರೇಖಾ ಸಾಲ್ಯಾನ್, ನೆಲ್ಲಿಕಾರು ಗ್ರಾ.ಪಂ. ಅಧ್ಯಕ್ಷ ಜಯಂತ ಹೆಗ್ಡೆ, ಶಿರ್ತಾಡಿ ಗ್ರಾ.ಪಂ. ಅಧ್ಯಕ್ಷೆ ಲತಾ ಹೆಗ್ಡೆ, ಮಾಜಿ ಅಧ್ಯಕ್ಷ ಪದ್ಮನಾಭ ಕೋಟ್ಯಾನ್, ವಾಲ್ಪಾಡಿ ಗ್ರಾ.ಪಂ. ಉಪಾಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ದರೆಗುಡ್ಡೆ ಗ್ರಾ.ಪಂ. ಉಪಾಧ್ಯಕ್ಷ ಮುನಿರಾಜ ಹೆಗ್ಡೆ, ನಾರಾವಿ ಸಂತ ಆಂತೋಣಿ ಪ.ಪೂ. ಕಾಲೇಜಿನ ಪ್ರಾಚಾರ್ಯ ವಂ. ಫಾ. ಅರುಣ್ ವಿಲ್ಸನ್ ಲೋಬೋ, ಕಂಬಳ ತಜ್ಞ ಗುಣಪಾಲ ಕಡಂಬ, ಉದ್ಯಮಿಗಳಾದ ದೇವಿಪ್ರಸಾದ್ ಶೆಟ್ಟಿ, ರಮಾನಾಥ ಸಾಲ್ಯಾನ್, ಗಣೇಶ್ ಕಾಮತ್ (ಜಿಕೆ), ಸತೀಶ್ ಶೆಟ್ಟಿ, ಪ್ರಕಾಶ ಶೆಟ್ಟಿ ಮಜಲೋಡಿಗುತ್ತು, ಹೇಮಾ ಕೆ.ಕೆ. ಪೂಜಾರಿ, ಪ್ರಾ.ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಶಂಕರ ಭಟ್, ನಿವೃತ್ತ ಮುಖ್ಯೋಪಾಧ್ಯಾಯ ಕೆ. ಎಸ್. ಹಿರ್ಗಾನ, ತಾ.ಪಂ. ಮಾಜಿ ಸದಸ್ಯ ರುಕ್ಕಯ ಪೂಜಾರಿ, ತಾ. ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಶಾಂತ್ ಜೈನ್, ಸ.ಹಿ.ಪ್ರಾ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಬಿ. ಅಳಿಯೂರು, ಎಸ್‍ಡಿಎಂಸಿ ಕಾರ್ಯಾಧ್ಯಕ್ಷ ವಿಶ್ವನಾಥ ಸಾಲ್ಯಾನ್, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಮಹಾದೇವ ಅಳಿಯೂರು, ಸ.ಹಿ.ಪ್ರಾ. ಶಾಲಾ ಮುಖ್ಯಶಿಕ್ಷಕಿ ಅನ್ನಪೂರ್ಣ, ಎಸ್‍ಡಿಎಂಸಿ ಅಧ್ಯಕ್ಷ ಸುಧಾಕರ ಡಿ. ಪೂಜಾರಿ, ಆತಿಥೇಯ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ವಸಂತ ಜೋಗಿ ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆಶಾ ಸ್ವಾಗತಿಸಿದರು. ಜಿಲ್ಲಾ ದೈ. ಶಿಕ್ಷಣಾಧಿಕಾರಿ ರಘುನಾಥ ಪ್ರಸ್ತಾವನೆಗೈದು ಫಲಿತಾಂಶ ಘೋಷಿಸಿದರು. ಆತಿಥೇಯ ಶಾಲಾ ಮುಖ್ಯಶಿಕ್ಷಕಿ ರೋಸಾ ವಿ.ಜೆ. ವಂದಿಸಿದರು. ನವೀನ್ ಅಂಬೂರಿ ನಿರೂಪಿಸಿದರು.







