Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಸಾಹಿತಿಗಳಿಗೆ ಡಿಎಂಕೆ ಮೆಂಟಾಲಿಟಿ ಬೇಡ:...

ಸಾಹಿತಿಗಳಿಗೆ ಡಿಎಂಕೆ ಮೆಂಟಾಲಿಟಿ ಬೇಡ: ಡಾ. ಎಸ್.ಎಲ್.ಭೈರಪ್ಪ

ಮಂಗಳೂರು ಲಿಟ್ ಫೆಸ್ಟ್ ಸಮಾರೋಪ

ವಾರ್ತಾಭಾರತಿವಾರ್ತಾಭಾರತಿ3 Nov 2018 11:02 PM IST
share
ಸಾಹಿತಿಗಳಿಗೆ ಡಿಎಂಕೆ ಮೆಂಟಾಲಿಟಿ ಬೇಡ: ಡಾ. ಎಸ್.ಎಲ್.ಭೈರಪ್ಪ

ಮಂಗಳೂರು, ನ. 3: ನನ್ನ ಬರವಣೆಗೆಯಲ್ಲಿ ಇಡೀ ಭಾರತ ಇದೆ. ನಾನು ಒಂದು ಜಿಲ್ಲೆ, ರಾಜ್ಯಕ್ಕೆ ಸೀಮಿತವಾಗಿ ಬರೆದಿರುವುದು ಕಡಿಮೆ. ಆ ಕಾರಣದಿಂದ ಭಾರತದಲ್ಲಿ ಹೆಚ್ಚು ಜನರನ್ನು ತಲುಪಲು ಸಾಧ್ಯವಾಗಿದೆ ಎಂದು ಹಿರಿಯ ಸಾಹಿತಿ ಡಾ.ಎಸ್.ಎಲ್.ಬೈರಪ್ಪ ತಿಳಿಸಿದರು.

ಅವರು ನಗರದ ಟಿಎಂಎಪೈ ಸಭಾಂಗಣದಲ್ಲಿ ದಿ ಐಡಿಯಾ ಆಫ್ ಭಾರತ ಮಂಗಳೂರು ಸಂಘಟನೆಯ ವತಿಯಿಂದ ಹಮ್ಮಿಕೊಂಡ ಉತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.

ಭಾರತದಲ್ಲಿ ಎಲ್ಲಿ ಹೋದರು ಜನರ ರೀತಿ, ನೀತಿಯ ನಡುವೆ ಹೆಚ್ಚು ವ್ಯತ್ಯಾಸಗಳಿಲ್ಲ ಸಾಮ್ಯತೆ ಇದೆ. ಈ ವಿಚಾರವನ್ನು ನನ್ನ ವಂಶ ವೃಕ್ಷ ಕೃತಿಯಲ್ಲಿ ಪ್ರಸ್ತಾಪಿಸಿದ್ದೇನೆ. ಗೃಹ ಭಂಗ ಕಾದಂಬರಿಯನ್ನು ಓದಿದ ಒಬ್ಬ ಪಂಜಾಬಿ ನಮ್ಮ ಸಂಸ್ಕೃತಿ ನಿಮ್ಮ ಸಂಸ್ಕೃತಿ ಸಾಮ್ಯತೆ ಇದೆ ಎಂದಿದ್ದಾರೆ. ನನ್ನ ಬರವಣಿಗೆಯಲ್ಲಿ ಅದನ್ನು ನೀವು ಕಾಣಬಹುದು. ನನ್ನ ಮಂದ್ರ ಕಾದಂಬರಿಯಲ್ಲಿ ಮುಂಬೈ, ಪುಣೆ, ಉತ್ತರ ಭಾರತ ಇದೆ ಕರ್ನಾಟಕ ಇಲ್ಲ. ಈ ರೀತಿ ಭಾರತವನ್ನು ನೋಡಬೇಕಾದರೆ ಸಮಗ್ರ ಭಾರತದ ಬಗ್ಗೆ ಪ್ರೀತಿ ಇರಬೇಕಾಗುತ್ತದೆ. ಈಗಿನ ಕೆಲವು ಸಾಹಿತಿಗಳಿಗೆ ಭಗವದ್ಗೀತೆ ಬೇಡ, ತತ್ವಶಾಸ್ತ್ರ ಬೇಡ ಎನ್ನುವ ಡಿಎಂಕೆ ಮೆಂಟಾಲಿಟಿ  ಅದನ್ನು ಮೀರದೆ ಇದ್ದರೆ ಅದು ಇಂಡಿಯನ್ ಬರಹ ಆಗುವುದಿಲ್ಲ ಎಂದು ಭೈರಪ್ಪ ತಿಳಿಸಿದರು.

ನವ್ಯದ ಬರಹಗಾರರು ನನ್ನನ್ನು ಮಟ್ಟ ಹಾಕಲು ಯತ್ನಿಸಿದರು

ನಾನು ಕಾದಂಬರಿ ಬರೆಯುತ್ತಿದ್ದ ಕಾಲದಲ್ಲಿ ಕನ್ನಡ ಸಾಹಿತ್ಯದಲ್ಲಿ ಹುಟ್ಟಿಕೊಂಡ ನವ್ಯ ಪಂಥದ ಬರಹಗಾರರ ಹಾವಳಿ ತುಂಬಾ ಇತ್ತು. ನನ್ನನ್ನು ಮಟ್ಟ ಹಾಕಲು ಯತ್ನಿಸಿದ್ದರು. ಆದರೆ ಅದು ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ನನಗೆ ಅನಿಸತೊಡಗಿತ್ತು. ನಾನು ಅವರನ್ನು ನಿರ್ಲಕ್ಷಿಸಿ ನನ್ನ ಕೃತಿಯನ್ನು ಮುಂದುವರಿಸುತ್ತಲೆ ಬಂದೆ. ನವ್ಯ ಕಾಲದ ಬರಹಗಾರರು ಅಪಾಯಕಾರಿಯಾಗಿದ್ದರು ಏಕೆಂದರೆ ಅವರು ಬರಹದ ಜೊತೆ ವಿಮರ್ಶೆಯನ್ನು ಮಾಡುತ್ತಿದ್ದರು ಎಂದು ಬೈರಪ್ಪ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಗೆ ಲೆಪ್ಟಿಸ್ಟ್ ಪ್ರವೃತ್ತಿ ಬಂದರೆ ಹಾಳಾಗುತ್ತೆ.:- ದಕ್ಷಿಣ ಕನ್ನಡ ಜಿಲ್ಲೆಯ ಜೀವಿಗಳು ಶ್ರಮ ಜೀವಿಗಳು, ತಮ್ಮ ಶ್ರಮದಿಂದ ಜಿಲ್ಲೆಯ ವಿವಿಧ ಕಡೆಗಳಲ್ಲಿ ಕಷ್ಟ ಪಟ್ಟು ಹೊಟೇಲ್ ಆರಂಭಿಸಿ, ವಿದೇಶಗಳಿಗೆ ತೆರಳಿ ಸಂಪಾದಿಸಿ ಮೇಲೆ ಬಂದಿದ್ದಾರೆ. ಬೆಂಗಳೂರಿನಲ್ಲಿ ಚೈನ್ ರೀತಿಯ ಅಂಗಡಿ ಮಳಿಗೆ ತೆರೆದಿದ್ದಾರೆ. 70-80 ವರ್ಷಗಳ ಹಿಂದೆ ಈ ಜಿಲ್ಲೆಯಲ್ಲಿ ಬಡತನ ಗರಿಷ್ಠ ಮಟ್ಟದಲ್ಲಿತ್ತು. ಈಗ ರಾಜ್ಯಕ್ಕೆ ಮಾದರಿಯಾದ ಜಿಲ್ಲೆಯಾಗಿದೆ. ಅದಕ್ಕೆ ಕಾರಣ ಇಲ್ಲಿನ ಜನರಲ್ಲಿರುವ ಶಿಕ್ಷನ ಪ್ರೇಮ, ಶಿಸ್ತು, ಪರಿಶ್ರಮ ಅದಕ್ಕೆ ಒಂದು ಉದಾಹರಣೆ. ಸಾಹಿತ್ಯ ಕ್ಷೇತ್ರದಲ್ಲಿ ಡಾ. ಶಿವರಾಮ ಕಾರಂತರು ಒಂದು ಉದಾಹರಣೆ ಇಂತಹ ಜಿಲ್ಲೆಗೆ ಕಮ್ಯೂನಿಸ್ಟ ಪ್ರವೃತ್ತಿ ಒಳ್ಳೆಯದಲ್ಲ, ಕಮ್ಯುನಿಸ್ಟರು ಯಾರಾದರೂ ಒಂದು ಉದ್ಯಮ ಸ್ಥಾಪಿಸಿದರೆ ಅದನ್ನು ನಾಶ ಮಾಡುತ್ತಾರೆ ಎಂದು ಕಮ್ಯುನಿಸ್ಟರ ವಿರುದ್ಧ ಭೈರಪ್ಪ ತಮ್ಮ ಅಸಹನೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಮೋದಿಯನ್ನು ಬೆಂಬಲಿಸಿ ಮಾತನಾಡುತ್ತಾ ಮೋದಿಯನ್ನು ವಿರೋಧ ಪಕ್ಷದವರು ಏನು ಮಾಡಿದರೂ ಟೀಕಿಸುತ್ತಾರೆ. ಮೋದಿಯವರ ಗಟ್ಟಿ ಮನೋಭಾವ ನನಗೆ ಗೊತ್ತಿದೆ. ಅದೇ ರೀತಿ ನಾನು, ನನ್ನನ್ನು ವಿರೊಧಿಸಿದವರನ್ನು ನಿರ್ಲಕ್ಷಿಸಿ ಬರೆಯುತ್ತಲೇ ಹೋದೆ ಎಂದು ವಿವರಿಸಿದರು.

ಬೈರಪ್ಪರನ್ನು ಅಭಿನಂದಿಸಿ ಚಕ್ರವರ್ತಿ ಸೂಲಿಬೆಲೆ ಮಾತನಾಡುತ್ತಾ, ಮಂಗಳೂರಿನಲ್ಲಿ ಮೊದಲ ಬಾರಿಗೆ ಇಂಟಲೆಕ್ಷುವಲ್‌ ಕ್ಷತ್ರಿಯರ ದಾಳಿಯಾಗಿದೆ. ಈ ದಾಳಿಗೆ ಬೆಂಬಲವಾಗಿ ನಿಂತ ಡಾ. ಎಸ್.ಎಲ್.ಭೈರಪ್ಪ ಅವರನ್ನು ನ್ಮಾನಿಸುವುದಾಗಿ ತಿಳಿಸಿದರು.

ಸಮಾರಂಭದಲ್ಲಿ ನಿಟ್ಟೆ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಡಾ.ಎನ್ ವಿನಯ ಹೆಗ್ಡೆ ಡಾ.ಎಸ್.ಎಲ್.ಬೈರಪ್ಪರನ್ನು ಸನ್ಮಾನಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X