Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ತುಳು ಜಾತಿ ಧರ್ಮ ಮೀರಿ ನಿಂತ ಭಾಷೆ: ಡಾ....

ತುಳು ಜಾತಿ ಧರ್ಮ ಮೀರಿ ನಿಂತ ಭಾಷೆ: ಡಾ. ವಿವೇಕ್ ರೈ

ಪುತ್ತೂರು ತಾಲೂಕು ತುಳು ಸಾಹಿತ್ಯ ಸಮ್ಮೇಳನ `ತುಳು ಪರ್ಬ-2018'

ವಾರ್ತಾಭಾರತಿವಾರ್ತಾಭಾರತಿ3 Nov 2018 11:20 PM IST
share
ತುಳು ಜಾತಿ ಧರ್ಮ ಮೀರಿ ನಿಂತ ಭಾಷೆ: ಡಾ. ವಿವೇಕ್ ರೈ

ಪುತ್ತೂರು, ನ. 3: ತುಳು ಭಾಷೆ ಜಾತಿ ಧರ್ಮಗಳನ್ನು ಮೀರಿನಿಂತ ಭಾಷೆಯಾಗಿದ್ದು, ಈ ಮಣ್ಣಿನ ಭಾಷೆಯಾಗಿರುವ ತುಳುವರಿಂದಾಗಿ ಇಂದು ಬೇಸಾಯ ಸಂಸ್ಕೃತಿ ಉಳಿದಿದೆ. ತುಳುನಾಡಿನಲ್ಲಿ 40ಕ್ಕೂ ಅಧಿಕ ಜಾತಿಯ ಜನರು ತುಳು ಭಾಷಿಗರಿದ್ದಾರೆ. ತುಳು ಭಾಷೆಯ ಜೊತೆಗೆ ಇಲ್ಲಿನ ಬೇಸಾಯ ಪದ್ದತಿ, ನೀರು, ನೆಲ ಉಳಿಸುವುದು ಬಹಳ ಮುಖ್ಯವಾಗಿದೆ. ಇಲ್ಲನ ಬಹುಜನರ ಭಾಷೆಯಾಗಿರುವ ತುಳುಭಾಷೆಯ ವಿಚಾರದಲ್ಲಿ ಜಾತಿ, ಧರ್ಮ, ಪಕ್ಷಗಳ ಹೆಸರಿನಲ್ಲಿ ಗಲಾಟೆ ಸಲ್ಲದು. ಇಲ್ಲಿನ ಎಲ್ಲರನ್ನೂ ಅವರಿಷ್ಟದಂತೆ ಬದುಕಲು ಬಿಡಬೇಕು ಎಂದು ತುಳು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ಬಿ.ಎ.ವಿವೇಕ್ ರೈ ಹೇಳಿದರು.

ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡಮಿ, ಪುತ್ತುರು ತಾಲೂಕು ತುಳು ಸಾಹಿತ್ಯ ಸಮ್ಮೇಳ ಸಮಿತಿಯ ಆಶ್ರಯದಲ್ಲಿ ಶನಿವಾರ ಇಲ್ಲಿನ ಮಂಜಲ್ಪಡ್ಡು ಸುದಾನ ವಸತಿಯುತ ಶಾಲೆಯಲ್ಲಿ ಜರಗಿದ ಪುತ್ತೂರು ತಾಲೂಕು ತುಳು ಸಾಹಿತ್ಯ ಸಮ್ಮೇಳನ `ತುಳು ಪರ್ಬ-2018' ಇದರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತುಳು ಭಾಷಾ ಬೆಳವಣಿಗೆಯಲ್ಲಿ ಆಧುನಿತ ತಂತ್ರಜ್ಞಾನಗಳಾದ ಇಂಟರ್‍ನೆಟ್, ಸಮೂಹ ಮಾಧ್ಯಗಳು ಹೆಚ್ಚು ಬಳಕೆಯಾಗಬೇಕು. ತುಳುವಿಗೆ ಅನುಕೂಲ ಕವಾದ ಕೀಬೋರ್ಡ್‍ಗಳನ್ನು ಸ್ಥಾಪಿಸುವ ಬಗ್ಗೆ ತಂತ್ರಜ್ಞಾನ ಅರಿತಿರುವ ಯುವಕರು ಮುಂದಾಗಬೇಕು. ತುಳು ಭಾಷೆಯ ಜ್ಞಾನಸಂಪತ್ತನ್ನು ಬೇರೆ ಭಾಷೆಗಳ ಲಿಪಿಗಳಲ್ಲಿ ಅಳವಡಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಹೊರರಾಜ್ಯ ಮತ್ತು ಹೊರದೇಶಗಳಿಗೆ ನೀಡುವ ಕೆಲಸ ನಡೆಯಬೇಕು. ತುಳು ಭಾಷಾ ಬೇಸಾಯದ ಜೊತೆಗೆ ತುಳು ಸಾಹಿತ್ಯದ ಸಂಶೋಧನೆ,ಅನುವಾದದ ಕೆಲಸ ನಡೆಯಬೇಕು. ತುಳು ಭಾಷೆಯಲ್ಲಿ ಸಾಕಷ್ಟು ಶಬ್ದಗಳಿರುವಾಗ ಆಂಗ್ಲ ಭಾಷೆಯನ್ನು ಬಳಸಬೇಕಾಗಿಲ್ಲ ಎಂದರು. 

ಜಾನಪದ ಕಲೆಯಾದ ಸಂಧಿ ಮತ್ತು ಪಾಡ್ದನ ಈ ಮಣ್ಣಿನ ಸೃಷ್ಠಿಯಾಗಿದ್ದು, ಅಕ್ಷರ ಜ್ಞಾವಿಲ್ಲದ ಗದ್ದೆಗಳಲ್ಲಿ ದುಡಿಯುವ ಹೆಂಗಸರು, ಪಂಬದರು,ಪರವರು, ನಲಿಕೆಯವರು,ಪಾಣಾರರು ಗಂಟೆಗಟ್ಟಲೆ ಹೇಳುವ ಸಂಧಿ, ಪಾಡ್ದನಗಳ ಕಟ್ಟಿದ್ದಾರೆ. ಈ ಮಣ್ಣಿಂದ ಬಂದಿರುವ ಸಂಧಿ, ಪಾಡ್ದನಗಳನ್ನು ಕಟ್ಟಿರುವ ಅವರೇ ಇಲ್ಲಿನ ಮೊದಲ ಸಾಹಿತಿಗಳು ಎಂದ ಅವರು ತುಳು ಸಂಶೋಧನೆಗೆ ವಿದ್ವಾಂಸರೇ ಆಗಬೇಕಾಗಿಲ್ಲ. ಮನಸ್ಸಿದ್ದರೆ ಸಾಕು.ತುಳುನಾಡಿನ ಮಂದಿ ತಮ್ಮ ಅಂಗಡಿ ಮಳಿಗೆಗಳಿಗೆ ತುಳು ಹೆಸರು ಇಡಬೇಕು. ತುಳು ಶಬ್ದಗಳ ಬಳಕೆ ಆದಷ್ಟು ಹೆಚ್ಚಾಗಬೇಕು. ತುಳು ಶಬ್ದಸಂಪತ್ತು ಬೆಳೆಸುವ ಕೆಲಸವಾಗಬೇಕು. ತುಳು ಕತೆ,ಕವನ, ಪುಸ್ತಕ ಕೃತಿಗಳನ್ನು ಅನುವಾದಿಸುವ ಮೂಲಕ ತುಳು ಸಾಹಿತ್ಯಗಳನ್ನು ಹೊರಗೆ ತಲುಪಿಸುವ ಕೆಲಸ ಆಗಬೇಕು ಎಂದ ಅವರು ಕೇವಲ ಒಂದೇ ದಾರಿಯಲ್ಲಿ ಹೋದರೆ ತುಳು ಭಾಷೆಯ ಅಭಿವೃದ್ಧಿ, ತುಳು ಸಂಸ್ಕøತಿಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. 

ಆಶೀರ್ವಚನ ನೀಡಿದ ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಮಾತನಾಡಿ ಭಾಷೆ ಮತ್ತು ಸಂಸ್ಕೃತಿ ಒಂದು ನಾಣ್ಯದ ಎರಡು ಮುಖಗಳಿದ್ದಂತೆ, ಭಾಷೆ ಮತ್ತು ಸಂಸ್ಕೃತಿ ಉಳಿದಲ್ಲಿ ಊರು, ದೇಶ ಉಳಿಯುತ್ತದೆ. ನಮ್ಮ ಮೃದುತ್ವದಿಂದಾಗಿ ಈ ಬಾಷೆ ಹೆಚ್ಚು ತುಳಿತಕ್ಕೆ ಒಳಗಾಗಿದೆ. ತುಳಿದಷ್ಟು ಗಟ್ಟಿಯಾಗುವ ಸಂಸ್ಕೃತಿ ತುಳು ಭಾಷೆಗಿದೆ. ಇದರಿಂದಾಗಿ ಇದೀಗ ತುಳುವಿಗೆ ವಿಶ್ವಮಾನ್ಯತೆ ದೊರೆತಿದೆ. ತುಳು ಭಾಷೆಯನ್ನು 8ನೇ ಪರಿಚ್ಚೇದಕ್ಕೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಎಲ್ಲರ ಪ್ರಯತ್ನಗಳಾಗಬೇಕು. ಇದೀಗ ತುಳು ಭಾಷೆಯು ಎಲ್ಲಾ ಭಾಷೆಗಳಂತೆ ಕಸಿಕಟ್ಟಿದ ಭಾಷೆಯಾಗಿ ಮಾರ್ಪಾಡುಗೊಳ್ಳುತ್ತಿದೆ. ತುಳು ಶುದ್ಧ ಭಾಷೆಯಾಗಿ ಬೆಳದು ಬರಬೇಕು ಎಂದ ಅವರು ಹರಿದು ಹಂಚಿ ಹೋಗಿರುವ ತುಳು ಭಾಷಾ ಪ್ರದೇಶವು ಇದೀಗ ಸಣ್ಣದಾಗಿದ್ದು. ತುಳು ಮಾತನಾಡುವ ಈ ಜಿಲ್ಲೆಗೆ 'ತುಳುನಾಡು'  ಎಂಬ ಹೆಸರು ನೀಡುವ ಅಗತ್ಯತೆ ಇದೆ. ಭಾಷೆಯ ಬೆಳವಣಿಗೆ ದೃಷ್ಠಿಯಿಂದ ತುಳುವರನ್ನು ಎಚ್ಚರಿಸುವ ಕೆಲಸ ನಿರಂತರವಾಗಬೇಕು. ತುಳು ಸಂಸ್ಕೃತಿ ಉಳಿಸಲು ಕಡಲಿನ ಕ್ರೀಯಾಶೀಲತೆಯನ್ನು ತುಳುವರು ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಇಲ್ಲಿನ ಆದಿವಾಸಿ, ಕೃಷಿ ಮತ್ತು ಋಷಿ ಸಂಸ್ಕೃತಿ ಯಿಂದ ತುಳುವಿಗೆ ಇಷ್ಟೊಂದು ಮಾನ್ಯತೆ ಲಬಿಸಿದೆ. ಇಲ್ಲಿನ ಪಾಡ್ದನಗಳು, ಬೇಸಾಯಗಳು ಮತ್ತು ಮಠ ಮಂದಿರಗಳು ತುಳುನಾಡಿಗೆ ಕಲಶವಾಗಿದೆ. ಆದರೆ ಈ ಹಿಂದೆ ತುಳು ಹೆಸರಿನಲ್ಲಿದ್ದ ಊರುಗಳ ಹೆಸರುಗಳು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಇಂದು ಬದಲಾವಣೆಯಾಗಿವೆ. ತುಳು ನಾಡಿನ ಜನರು ಎಲ್ಲಿ ಹೋದರೂ ತಮ್ಮತನ ತೋರ್ಪಡಿಸಿಕೊಳ್ಳುವ ವಿಶಿಷ್ಟಗುಣ ಹೊಂದಿದ್ದಾರೆ ಎಂದು ಹೇಳಿದರು. 

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕುಕ್ಕೇ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮಾತನಾಡಿದರು.

ಈ ಸಂದರ್ಭದಲ್ಲಿ ಭಾಸ್ಕರ ರೈ ಕುಕ್ಕುವಳ್ಳಿ ಅವರ `ಗಂಧಸಾಲೆ',ಅಗ್ರಾಳ ನಾರಾಯಣ ರೈ ಅವರು ಬರೆದ ` ತುಳುವೆರೆ ಮರಪಂದಿ ನೆನಪುಲು' ತುಳು ಅಕ್ಷರಾಂಜಲಿ ಪುಸ್ತಕ ಮತ್ತು `ಸೃಷ್ಠಿ ಸೃಷ್ಠಿ ತುಲುನಾಡ ಬಾಸಾ ಸೃಷ್ಠಿ' ಕವನ ಸಂಕಲನ ಹಾಗೂ ವಿಜಯ ಕುಮಾರ್ ಹೆಬ್ಬಾರಬೈಲು ಅವರ `ಪೂವರಿ' ತುಳು ಪತ್ರಿಕೆಯ `ತುಡರ್‍ಪರ್ಬ' ಸಂಚಿಕೆ ಬಿಡುಗಡೆಗೊಳಿಸಲಾಯಿತು. 

ವೇದಿಕೆಯಲ್ಲಿ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ ನಡುಬೈಲು, ತುಳು ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ಹೇಮನಾಥ ಶೆಟ್ಟಿ ಕಾವು, ವಿಜಯ ಹಾರ್ವಿನ್, ಜನಾರ್ದನ ಎಸ್,ಪ್ರೇಮಲತಾ ರಾವ್, ಹರಿಣಾಕ್ಷಿ ಜೆ.ಶೆಟ್ಟಿ, ಆರ್ಥಿಕ ಸಮಿತಿಯ ಅಧ್ಯಕ್ಷ ರಾಮಣ್ಣ ಗೌಡ ಗುಂಡೋಳೆ, ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷರಾದ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪೀಟರ್ ವಿಲ್ಸನ್ ಪ್ರಭಾಕರ್, ನಗರಸಭಾ ಸದಸ್ಯ ವಸಂತ. ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಸುಧಾ ನಾಗೇಶ್, ವಿಜಯ ಶೆಟ್ಟಿ ಸಾಲೆತ್ತೂರು, ತಾರಾನಾಥ ಗಟ್ಟಿ ಕಾಪಿಕ್ಕಾಡ್, ಎ.ಗೋಪಾಲ ಅಂಚನ್, ವಿದ್ಯಾಶ್ರೀ ಎಸ್, ದುರ್ಗಾ ಮೆನನ್, ಎ. ಶಿವಾನಂದ ಕರ್ಕೆರಾ, ಬೆನೆಟ್ ಜಿ ಅಮ್ಮಣ್ಣ, ಚಂದ್ರಶೇಖರ ಗಟ್ಟಿ ಬೋಳೂರು ಮತ್ತಿತರರು ಉಪಸ್ಥಿತರಿದ್ದರು.

ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಸ್ವಾಗತಿಸಿದರು. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ವಂದಿಸಿದರು. ಸಮ್ಮೇಳನ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ತುಳು ಸಾಹಿತ್ಯ ಅಕಾಡಮಿ ಸದಸ್ಯ ನಿರಂಜನ ರೈ ಮಠಂತಬೆಟ್ಟು ಮತ್ತು ಅಕ್ಷಿತಾ ರೈ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮಕ್ಕೆ ಮೊದಲು ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿ ತುಳು ಸಂಸ್ಕøತಿಯನ್ನು ಅನಾವರಗೊಳಿಸುವ ಮೆರವಣಿಗೆ `ತುಳುವೆರೆ ದಿಬ್ಬಣವನ್ನು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಜಯಂತ ನಡುಬೈಲು ಚಾಲನೆ ನೀಡಿದರು. ಮೆರವಣಿಗೆಯು ಮುಖ್ಯರಸ್ತೆಯಾಗಿ ಸುದಾನ ಶಾಲೆಯ ತನಕ ಸಾಗಿ ಸಮಾಪನಗೊಂಡಿತು. ಜಾನಪದ ಶೈಲಿಯ ಗೊಂಬೆ ನೃತ್ಯ, ಕೀಲು ಕುದುರೆ ನೃತ್ಯ, ಕುಣಿತದ ಚೆಂಡೆವಾದನ, ಬಣ್ಣದ ಛತ್ರಗಳು, ಕೊಂಬು-ವಾಲಗ, ಫೂರ್ಣಕುಂಭ ಸ್ವಾಗತ ದಿಬ್ಬಣದ ವಿಶೇಷ ಆಕರ್ಷಣೆಯಾಗಿತ್ತು. ಶ್ವೇತ ವಸ್ತ್ರಧಾರಿಗಳಾಗಿ,ಮುಂಡಾಸು ಕಟ್ಟಿಕೊಂಡು ಪುರುಷರು ದಿಬ್ಬಣದಲ್ಲಿ ಪಾಲ್ಗೊಂಡಿದ್ದರು. ಸಾಂಪ್ರದಾಯಿಕ ಶೈಲಿಯ ವಸ್ತ್ರವಿನ್ಯಾಸಗಳೊಂದಿಗೆ ಮಹಿಳೆಯರು ಸಾಗಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X