ವಿದ್ಯಾರ್ಥಿಗಳಿಗೆ ಜೂನಿಯರ್ ರೆಡ್‌ಕ್ರಾಸ್ ಪರೀಕ್ಷೆ
ಉಡುಪಿ, ನ.4: ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯಿಂದ ಉಡುಪಿ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜೂನಿಯರ್ ರೆಡ್ ಕ್ರಾಸ್ ಸ್ವರ್ಧಾತ್ಮಕ ಪರೀಕ್ಷೆ ಯನ್ನು ನ.24ರಂದು ಬೆಳಗ್ಗೆ 10.30ರಿಂದ 12ಗಂಟೆಯವರೆಗೆ ಆಯಾ ಶಾಲೆ ಯಲ್ಲಿ ಏರ್ಪಡಿಸಲಾಗಿದೆ.
ಸ್ವರ್ಧಾಳುಗಳು ಪದವಿಪೂರ್ವ ಕಾಲೇಜಿನವರೆಗೆ ಭಾಗವಹಿಸಬಹುದು.
ಸ್ಪರ್ಧೆಗೆ ಶಾಲಾ ಮುಖ್ಯೋಪಾಧ್ಯಾಯರಲ್ಲಿ ಹೆಸರು ನೋಂದಾಯಿಸಲು ನ.10 ಕೊನೆಯ ದಿನಾಂಕವಾಗಿದೆ. ಭಾಗವಹಿಸುವ ವಿದ್ಯಾರ್ಥಿಗಳ ನೋಂದಾವಣೆಗೆ ಮಿತಿ ಇಲ್ಲ. ಎಲ್ಲಾ ವಿದ್ಯಾರ್ಥಿಗಳಿಗೆ ರೆಡ್ ಕ್ರಾಸ್ ಪ್ರಮಾಣ ಪತ್ರ ನೀಡಲಾಗು ವುದು. ಪ್ರತಿಯೊಬ್ಬ ಅಭ್ಯರ್ಥಿಯು ಪರೀಕ್ಷೆಯ ಪ್ರವೇಶ ಶುಲ್ಕ 50ರೂ.ವನ್ನು ಪಾವತಿಸಬೇಕು ಎಂದು ಜೂನಿಯರ್ ರೆಡ್‌ಕ್ರಾಸ್ ಕೋಆರ್ಡಿನೇಟರ್ ಡಾ. ಅರವಿಂದ ನಾಯಕ್ ಅಮ್ಮುಂಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





