ಬೈಂದೂರು: ಸುಲುಗೋಡು ಮತಗಟ್ಟೆಯಲ್ಲಿ ಗರಿಷ್ಠ ಶೇ.75.48 ಮತದಾನ
ಉಡುಪಿ, ನ.4: ಶಿವಮೊಗ್ಗ ಲೋಕಸಭಾ ಉಪಚುನಾವಣೆ ಪ್ರಯುಕ್ತ ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 2,21,972 ಮತ ದಾರರ ಪೈಕಿ 1,30,576 ಮಂದಿ ಮತ ಚಲಾಯಿಸುವ ಮೂಲಕ ಶೇ.58.98 ರಷ್ಟು ಮತದಾನವಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
1,07,922 ಪುರುಷ ಮತದಾರರಲ್ಲಿ 57,851(ಶೇ.53.60) ಮಂದಿ ಹಾಗೂ 1,14,049 ಮಹಿಳಾ ಮತದಾರರ ಪೈಕಿ 72,181(ಶೇ.63.28) ಮಂದಿ ಮತದಾರರು ಹಕ್ಕು ಚಲಾಯಿಸಿದ್ದಾರೆ. ಎಲೆಕ್ಷನ್ ಡ್ಯುಟಿ ಸರ್ಟಿಫಿಕೇಟ್ ನಲ್ಲಿ ಪುರುಷರು 524 ಹಾಗೂ ಮಹಿಳೆಯರು 20 ಮಂದಿ ಮತದಾನ ಮಾಡಿದ್ದಾರೆ.
ಕ್ಷೇತ್ರದ ಸುಲುಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಯಲ್ಲಿ ಅತ್ಯಂತ ಹೆಚ್ಚು ಶೇ.75.48(881 ಮತದಾರರ ಪೈಕಿ 665 ಮತ ಚಲಾವಣೆ) ಹಾಗೂ ಹೊಸಂಗಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಅತ್ಯಂತ ಕಡಿಮೆ ಶೇ.42.54(966 ಮತದಾರರ ಪೈಕಿ 631 ಮಂದಿ ಮತ ಚಲಾವಣೆ) ಮತದಾನ ನಡೆದಿದೆ.
Next Story





