ಉಳ್ಳಾಲ: ಜೆಡಿಎಸ್ ಕೌನ್ಸಿಲರ್‌ಗಳಿಗೆ ಸನ್ಮಾನ

ಮಂಗಳೂರು, ನ.4: ಉಳ್ಳಾಲ ನಗರ ಜಾತ್ಯತೀತ ಜನತಾದಳ ಕಾರ್ಯಕರ್ತರ ಸಭೆ ಮತ್ತು ಉಳ್ಳಾಲ ನಗರಸಭೆಗೆ ನೂತನವಾಗಿ ಆಯ್ಕೆಯಾದ ಕೌನ್ಸಿಲರ್‌ಗಳಿಗೆ ಸನ್ಮಾನ ಕಾರ್ಯಕ್ರಮವು ಉಳ್ಳಾಲ ನಗರ ಜಾತ್ಯತೀತ ಜನತಾದಳದ ನೂತನ ಅಧ್ಯಕ್ಷ ಯು.ಕೆ. ಮುಹಮ್ಮದ್ ಮುಸ್ತಫಾ ಅವರ ಅಧ್ಯಕ್ಷತೆಯಲ್ಲಿ ತೊಕ್ಕೊಟ್ಟಿನ ಖಾಸಗಿ ಹಾಲ್‌ನಲ್ಲಿ ಇತ್ತೀಚೆಗೆ ಜರುಗಿತು.
ಪಕ್ಷದ ಮುಖಂಡರಾದ ನಝೀರ್ ಉಳ್ಳಾಲ್ ಮತ್ತು ಯು.ಎಚ್ ಫಾರೂಕ್ ವೀಕ್ಷಕರಾಗಿ ಭಾಗವಹಿಸಿದ್ದರು. ಕೌನ್ಸಿಲರ್‌ಗಳಾದ ಯು.ಎಂ. ಜಬ್ಬಾರ್, ಖಲೀಲ್ ಮುಕ್ಕಚ್ಚೇರಿ, ಬಶೀರ್ ಕೈಕೋ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಇಬ್ರಾಹೀಂ ತವಕ್ಕಲ್, ಹರಿಣಿ ಬಂಗೇರ,ನಗರಸಭೆಯ ಮಾಜಿ ಕೌನ್ಸಿಲರ್ ಅಬ್ದುಲ್ ಫತಾಕ್ ಉಪಸ್ಥಿತರಿದ್ದರು. ಉಳ್ಳಾಲ ನಗರ ಜನತಾ ದಳದ ಪ್ರಧಾನ ಕಾರ್ಯದರ್ಶಿ ಹೈದರ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.
Next Story





