ಸ್ವಚ್ಛ ಸುರತ್ಕಲ್ ಅಭಿಯಾನದ ನಾಲ್ಕನೇ ವಾರದ ಶ್ರಮದಾನ

ಮಂಗಳೂರು, ನ.4: ರಾಮಕೃಷ್ಣ ಮಿಷನ್ ಮಂಗಳೂರು, ನಾಗರಿಕ ಸಲಹಾ ಸಮಿತಿ ಸುರತ್ಕಲ್ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಎಂಆರ್‌ಪಿಎಲ್ ಸಂಸ್ಥೆಯ ಸಹಕಾರದೊಂದಿಗೆ ನಡೆಯುತ್ತಿರುವ ರಾಮಕೃಷ್ಣ ಮಿಷನ್ ಸ್ವಚ್ಛ ಸುರತ್ಕಲ್ ಅಭಿಯಾನದ ನಾಲ್ಕನೇ ವಾರದ ಸ್ವಚ್ಛತಾ ಶ್ರಮದಾನವನ್ನು ಎಸ್‌ಪಿವೈಎಸ್‌ಎಸ್ ಯೋಗ ಸಮಿತಿಯ ನೇತ್ರಾವತಿ ವಲಯ ಸಂಚಾಲಕ ಹರೀಶ್ ಕೋಟ್ಯಾನ್ ರವಿವಾರ ಉದ್ಘಾಟಿಸಿದರು.
ಪತಂಜಲಿ ಯೋಗ ಶಿಕ್ಷಣ ಸಮಿತಿ ಸದಸ್ಯರು ಆರು ತಂಡಗಳಲ್ಲಿ ವಿದ್ಯಾದಾಯಿನಿ ಶಾಲೆಯ ಮುಂಭಾಗ , ಅಂಡರ್ ಪಾಸ್, ಮಹಾಲಿಂಗೇಶ್ವರ ದೇವಸ್ಥಾನ ಪರಿಸರ, ಸುರತ್ಕಲ್ ಮೇಲ್ಸೇತುವೆಯ ತಳಭಾಗ, ಪದ್ಮಾವತಿ ಆಸ್ಪತ್ರೆ ರಸ್ತೆ, ಸೇಕ್ರೆಡ್ ಚರ್ಚ್ ರಸ್ತೆಯ ಸಮೀಪ ಶ್ರಮದಾನ ನಡೆಸಿದರು.
ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿವಿ ಸುರತ್ಕಲ್ ಶಾಖೆ ಪ್ರಮುಖರಾದ ಬಿ.ಕೆ.ಪ್ರಭಾ,ಬಿ.ಕೆ. ಸುಜಯಾ ಶೆಟ್ಟಿ, ಬಿ.ಕೆ. ನೇತ್ರಾ,ಬಿ.ಕೆ. ವಿಶಾಲಾಕ್ಷಿ, ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷ ಜೆ. ಡಿ. ವೀರಪ್ಪ, ನಾಗರಿಕ ಸಲಹಾ ಸಮಿತಿಯ ಸಂಚಾಲಕ ಡಾ. ರಾಜಮೋಹನ್ ರಾವ್, ಸ್ವಚ್ಛ ಸುರತ್ಕಲ್ ಅಭಿಯಾನದ ಸಂಯೋಜಕ ಸತೀಶ್ ಸದಾನಂದ್, ಸ್ವಚ್ಛ ಮನಸ್ಸು ಸಂಯೋಜಕ ಸಚ್ಚಿದಾನಂದ, ರೋಟರಿ ಕ್ಲಬ್ ಸುರತ್ಕಲ್ ಉಪಾಧ್ಯಕ್ಷ ಪ್ರೊ. ಕೃಷ್ಣಮೂರ್ತಿ, ಪತಂಜಲಿ ಯೋಗಶಿಕ್ಷಣ ಸಮಿತಿಯ ಪ್ರಾಂತ ಸಂಚಾಲಕ ರವೀಶ್ ಕುಮಾರ್, ನಾಯಕರಾದ ಚಂದ್ರ ಶೇಖರ್, ನಾರಾಯಣ, ಜಗನ್ನಾಥ, ಗೋಪಾಲಕೃಷ್ಣ ಯುವ ಸೇವಾ ದಳದ ಅಂಕುಶ್ ಶೆಟ್ಟಿ, ಕುಳಾಯಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಚಂದ್ರಶೇಖರ್, ನಾರಾಯಣ ಪಿ.ವಿ. ಶ್ರಮದಾನದಲ್ಲಿ ಸಹಕರಿಸಿದರು.







