ಕಾರಿಗೆ ಟ್ರಕ್ ಢಿಕ್ಕಿ ಹೊಡೆದು 12 ಮಂದಿ ಮೃತ್ಯು: 7 ಜನರಿಗೆ ಗಾಯ

ಸೋನಿಪತ್, ನ.4: ತಪ್ಪು ದಿಕ್ಕಿನಿಂದ ಬಂದ ಟ್ರಕ್ ಒಂದು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ 12 ಮಂದಿ ಮೃತಪಟ್ಟು, 7 ಮಂದಿ ಗಾಯಗೊಂಡ ಘಟನೆ ದಿಲ್ಲಿ-ಸೋನಿಪತ್ ಹೆದ್ದಾರಿಯಲ್ಲಿ ಸಂಭವಿಸಿದೆ. ಟ್ರಕ್ ದ್ವಿಚಕ್ರ ವಾಹನವೊಂದಕ್ಕೂ ಢಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಈವರೆಗೆ 8 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. 7 ಮಂದಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ” ಎಂದು ಸೋನಿಪತ್ ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಅಫಘಾತ ನಡೆದ ತಕ್ಷಣ ಟ್ರಕ್ ಚಾಲಕ ವಾಹನದಿಂದ ಹಾರಿ ಪರಾರಿಯಾಗಿದ್ದಾನೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.
Next Story





