ಮೊದಲ ಟ್ವೆಂಟಿ-20 ಪಂದ್ಯ: ಭಾರತಕ್ಕೆ 110 ರನ್ ಗಳ ಸುಲಭದ ಸವಾಲು

ಕೋಲ್ಕತಾ, ನ.4: ಟೆಸ್ಟ್ ಹಾಗೂ ಏಕದಿನ ಸರಣಿಯನ್ನು ಕಳೆದುಕೊಂಡಿರುವ ಪ್ರವಾಸಿ ವೆಸ್ಟ್‌ಇಂಡೀಸ್ ತಂಡ ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ರವಿವಾರ ಭಾರತದ ವಿರುದ್ಧ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 109 ರನ್ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವೆಸ್ಟ್ ಇಂಡೀಸ್ ತಂಡ ಭಾರತದ ಬೌಲರ್‌ಗಳ ಸಂಘಟಿತ ದಾಳಿಯ ಮುಂದೆ ತತ್ತರಿಸಿತು. ಕುಲ್‌ದೀಪ್ ಯಾದವ್ (13ಕ್ಕೆ 3) ವಿಂಡೀಸ್‌ಗೆ ಪ್ರಹಾರ ನೀಡಿದರು.
ವಿಂಡೀಸ್ ಪರ ಫ್ಯಾಬಿಯಾನ್ ಆ್ಯಲೆನ್(27) ಗರಿಷ್ಠ ಸ್ಕೋರ್ ದಾಖಲಿಸಿದರು.
Next Story





