ಮರಳು ದಿಬ್ಬ ತೆರವು ಗುತ್ತಿಗೆಯಲ್ಲಿ ದಲಿತರಿಗೆ ಮೀಸಲಾತಿ ನೀಡಲು ಆಗ್ರಹ

ಉಡುಪಿ, ನ.4: ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ಇತ್ತೀಚೆಗೆ ಭೇಟಿ ನೀಡಿದ ರಾಜ್ಯ ಗಣಿ ಇಲಾಖೆಯ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕಠಾರಿಯ ಅವರಿಗೆ ಮನವಿ ಸಲ್ಲಿಸಿದ ದಲಿತ ಮುಖಂಡರ ನಿಯೋಗ, ಜಿಲ್ಲೆ ಯಲ್ಲಿ ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವಿಗೆ ಸಂಬಂಧಿಸಿ 2011ರ ಮೊದಲಿನ ಗುತ್ತಿಗೆಯಂತೆ ಮೀಸಲಾತಿ ಪಾಲು 26 ದಲಿತರಿಗೆ ಗುತ್ತಿಗೆ ನೀಡಬೇಕು ಎಂದು ಒತ್ತಾಯಿಸಿದೆ.
ಸಾಂಪ್ರದಾಯಿಕವಾಗಿ ಮರಳುಗಾರಿಕೆ ಮಾಡುವವರಿಗೆ ಗುತ್ತಿಗೆ ನೀಡಬೇಕು. ಈಗ ಬಾರ್ ಮಾಲಕರು, ಉದ್ಯಮಿಗಳು, ರಿಯಲ್ ಎಸ್ಟೇಟ್, ಪಿಡಬ್ಲ್ಯುಡಿ ಗುತ್ತಿಗೆದಾರರಿಗೆ ಮರಳು ಗುತ್ತಿಗೆಯನ್ನು ನೀಡಲಾಗಿದೆ. ಇವರು ಜೀವಮಾನ ದಲ್ಲಿ ಎಂದೂ ಮರಳು ತೆಗೆದವರಲ್ಲ. ಇವರೆಲ್ಲ ಮರಳು ಕಾರ್ಮಿಕರೇ ಅಲ್ಲ ಎಂದು ನಿಯೋಗ ಆರೋಪಿಸಿದೆ.
ರೋಸ್ಟರ್ ನಿಯಮದಂತೆ ಮೀಸಲಾತಿ ಅನ್ವಯ ಈ ಸಂಪತ್ತನ್ನು ಅನುಭವಿ ಸುವ ಅವಕಾಶವನ್ನು ನಮಗೂ ಮಾಡಿಕೊಡಬೇಕು. ಒಂದು ವೇಳೆ ದಲಿತರಿಗೆ ಮೀಸಲಾತಿ ನೀಡದಿದ್ದಲ್ಲಿ ನ್ಯಾಯಲಯದ ಮೋರೆ ಹೋಗಿ ಈಗ ನೀಡಿರುವ ಗುತ್ತಿಯನ್ನು ರದ್ದುಪಡಿಸಲಾಗುವುದು. ಅಲ್ಲದೆ ಉಡುಪಿಯಲ್ಲಿ ರಾಜ್ಯ ಮಟ್ಟದ ವಿವಿಧ ಸಂಘಟನೆಗಳ ನಾಯಕರನ್ನು ಕರೆಸಿ ಇನ್ನೊಮ್ಮೆ ಉಡುಪಿ ಚಲೋ ಮಾಡಲಾಗುವುು ಎಂದು ನಿಯೋಗ ಎಚ್ಚರಿಕೆ ನೀಡಿತು.
ದಲಿತರ ನಿಯೋಗದಲ್ಲಿ ದಸಂಸ ಭೀಮ ಘರ್ಜನೆಯ ರಾಜ್ಯ ಸಂಚಾಲಕ ಉದಯ ಕುಮಾರ್ ತಲ್ಲೂರು, ದಸಂಸ ಅಂಬೇಡ್ಕರ್ ವಾದ ರಾಜ್ಯ ಸಂಘ ಟನಾ ಸಂಚಾಲಕ ಸುಂದರ ಮಾಸ್ಟರ್, ದಲಿತ ಧಮನಿತರ ಜಿಲ್ಲಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಸಮತ ಸೈನಿಕ ದಳದ ಜಿಲ್ಲಾ ಸಂಚಾಲಕ ವಿಶ್ವನಾಥ ಪೆತ್ರಿ, ದಸಂಸ ಕೃಷ್ಣಪ್ಪ ಸ್ಥಾಪಿತ ಜಿಲ್ಲಾ ಸಂಚಾಲಕ ರಮೇಶ್ ಕೋಟ್ಯಾನ್, ದಸಂಸ ವಿಭಾಗೀಯ ಸಂಚಾಲಕ ಶೇಖರ ಹೆಜಮಾಡಿ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಪಿಡಬ್ಲ್ಯುಡಿ ಗುತಿಗೆದಾರರ ಜಿಲ್ಲಾಧ್ಯಕ್ಷ ಪರಮೇಶ್ವರ ಉಪ್ಪೂರು, ಭೌಧ್ಧ ಮಹಾಸಭಾದ ಪ್ರಶಾಂತ್ ತೊಟ್ಟಂ, ಚಂದ್ರಮ ತಲ್ಲೂರು, ಸುಧಾಕರ ಸೂರ್ಗೋಳಿ ಮೊದಲಾದವರು ಉಪಸ್ಥಿತರಿದ್ದರು.







