ಬೆಂಗಳೂರು: ಸಿನೆಮಾ ನಿರ್ದೇಶಕನ ಕಾರಿಗೆ ಬೆಂಕಿ
ಬೆಂಗಳೂರು, ನ.4: ಕನ್ನಡ ಸಿನೆಮಾ ನಿರ್ದೇಶಕ ಶ್ರೀನಿವಾಸ್ ಜಿ. ರಾಮನಗರ ಅವರ ಕಾರಿಗೆ ದುಷ್ಕರ್ಮಿಯೊಬ್ಬ ಬೆಂಕಿ ಹಚ್ಚಿರುವ ಆರೋಪ ಕೇಳಿಬಂದಿದೆ.
ನಗರದ ನಾಗರಬಾವಿಯ ಎರಡನೆ ಹಂತದಲ್ಲಿನ ಶ್ರೀನಿವಾಸ್ ಮನೆ ಮುಂದೆ ನಿಂತಿದ್ದ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದಾಗಿ ತಿಳಿದುಬಂದಿದೆ.
ಶನಿವಾರ ತಡರಾತ್ರಿ ಸುಮಾರಿಗೆ ಈ ಘಟನೆ ನಡೆದಿದೆ. ದುಷ್ಕರ್ಮಿಯ ಈ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.
Next Story





