ಹನೂರು: ನರೇಗಾ ಯೋಜನೆಯ ಪ್ರಗತಿ ಪರಿಶೀಲನೆ

ಹನೂರು,ನ.4: ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ರವರು ಕೌದಳ್ಳಿ ಗ್ರಾಮ ಪಂ.ಗೆ ಭೇಟಿ ನೀಡಿ ನರೇಗಾ ಯೋಜನೆಯ ಪ್ರಗತಿ ಪರಿಶೀಲನೆ ಮಾಡಿದರು.
ಬಳಿಕ ಮಾತನಾಡಿದ ಅವರು, ದೀಪಾವಳಿ ಹಬ್ಬ ಬರುತ್ತಿರುವ ಸಂದರ್ಭದಲ್ಲಿ 3-4 ದಿನ ರಜೆ ಇದ್ದು, ನರೇಗಾ ಯೋಜನೆಯ ಎನ್.ಎಮ್.ಆರ್ ಸೃಷ್ಟಿ ಮಾಡಿ 7 ದಿನಗಳ ನಂತರ ಪಿ.ಡಿ ಜನರೇಟ್ ಆಗುವುದರಿಂದ ಎಲ್ಲಾ ಗ್ರಾಮ ಪಂ.ಗಳು ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚು ಆದ್ಯತೆ ನೀಡಬೇಕು ಮತ್ತು ಎನ್.ಎಮ್.ಆರ್ ಸೃಷ್ಠಿ ಮಾಡಬೇಕೆಂದು ನಿರ್ದೇಶನ ನೀಡಿದ್ದರು.
ಪಿ.ಡಿ.ಓ ಪ್ರದೀಪ್ ಕುಮಾರ್ ಮಾತನಾಡಿ, 10 ಸಾವಿರ ಎನ್.ಎಮ್.ಆರ್ ಸೃಷ್ಟಿ ಮಾಡಲು ಗುರಿ ನೀಡಿದ್ದು, 40% ಪ್ರಗತಿ ಸಾಧಿಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂ. ಸ್ವಚ್ಛತಾ ಆಂದೋಲನ ಸಿಬ್ಬಂದಿ ಸ್ಯಾಮ್ಯುಯೆಲ್ ಬಿಲ್ ಕಲೆಕ್ಟರ್ ದೊರೆಸ್ವಾಮಿ ಇದ್ದರು.
Next Story





