ಮಹಿಳೆ ನಾಪತ್ತೆ: ದೂರು ದಾಖಲು
ಬಂಟ್ವಾಳ, ನ. 4: ಸಜಿಪಮೂಡ ಗ್ರಾಮದ ನಗ್ರಿ ಸಮೀಪದ ಮಿತ್ತಮಜಲು ನಿವಾಸಿ ನಾಗವೇಣಿ (65) ಎಂಬವರು ನಾಪತ್ತೆಯಾಗಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಅವಿವಾಹಿತರಾಗಿರುವ ನಾಗವೇಣಿ ಅವರು, ನ. 2ರಂದು ಮನೆಯಿಂದ ಹೊರಹೋದವರು ಹಿಂದಿರುಗಿಲ್ಲ. ಸಂಬಂಧಿಕರ ಹಾಗೂ ಸ್ನೇಹಿತರ ಮನೆಯಲ್ಲಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಸಹೋದರ ವಾಮನ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





