Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಸಿಆರ್‌ಝಡ್ ಪ್ರದೇಶ ದೇಶದ ಆಸ್ತಿ: ಅಲ್ಲಿ...

ಸಿಆರ್‌ಝಡ್ ಪ್ರದೇಶ ದೇಶದ ಆಸ್ತಿ: ಅಲ್ಲಿ ಮರಳುಗಾರಿಕೆ ಅಕ್ರಮ; ರಾ.ಪರಿಸರ ಒಕ್ಕೂಟದ ಶಶಿಧರ್ ಶೆಟ್ಟಿ

ವಾರ್ತಾಭಾರತಿವಾರ್ತಾಭಾರತಿ5 Nov 2018 7:38 PM IST
share
ಸಿಆರ್‌ಝಡ್ ಪ್ರದೇಶ ದೇಶದ ಆಸ್ತಿ: ಅಲ್ಲಿ ಮರಳುಗಾರಿಕೆ ಅಕ್ರಮ; ರಾ.ಪರಿಸರ ಒಕ್ಕೂಟದ ಶಶಿಧರ್ ಶೆಟ್ಟಿ

ಉಡುಪಿ, ನ.5: ಕರಾವಳಿ ನಿಯಂತ್ರಣ ವಲಯ(ಸಿಆರ್‌ಝೆಡ್) ಎಂಬುದು ಕೇವಲ ಆಯಾ ಜಿಲ್ಲೆಗೆ ಸಂಬಂಧಿಸಿದ ಆಸ್ತಿಯಲ್ಲ. ಅದು ಇಡೀ ದೇಶದ ಆಸ್ತಿ. ಅಲ್ಲಿಗೆ ಅಂತಾರಾಷ್ಟ್ರೀಯ ಕಾನೂನು ಅನ್ವಯಿಸುತ್ತದೆ. ಯಾರೋ ಕೆಲವು ರಾಜಕಾರಣಿಗಳು, ಜನಪ್ರತಿನಿಧಿಗಳು ಬೇಕಾಬಿಟ್ಟಿಯಾಗಿ ಅಲ್ಲಿನ ನೈಸರ್ಗಿಕ, ಪ್ರಾಕೃತಿಕ ಸಂಪತ್ತಿನ ಬಳಕೆಯನ್ನು ತಮಗೆ ಬೇಕಾದಂತೆ ನಿರ್ಧರಿಸಲು ಬರುವುದಿಲ್ಲ ಎಂದು ರಾಷ್ಟ್ರೀಯ ಪರಿಸರ ಮತ್ತು ವನ್ಯಜೀವಿ ಪ್ರೇಮಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಶಿಧರ ಶೆಟ್ಟಿ ಹೇಳಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಜಿಲ್ಲೆಯಲ್ಲಿ ಮರಳು ಮಾಫಿಯಾ ಕಳೆದ ಕೆಲವು ವರ್ಷಗಳಿಂದ ಪ್ರಾಕೃತಿಕ ಸಂಪತ್ತನ್ನು ಬೇಕಾಬಿಟ್ಟಿಯಾಗಿ ಕೊಳ್ಳೆ ಹೊಡೆದಿದೆ. ಮರಳು ಹಾಗೂ ಪಶ್ಚಿಮ ಘಟ್ಟದ ಶೋಲಾ ಕಾಡುಗಳ ನಾಶ, ಮುಂಬರುವ ದಿನಗಳಲ್ಲಿ ಜಿಲ್ಲೆಯ ಜೀವಸಂಕುಲಗಳ ಮೇಲೆ ಭೀಕರ ಪರಿಣಾಮವನ್ನು ಉಂಟು ಮಾಡಲಿದೆ ಎಂದವರು ಎಚ್ಚರಿಸಿದರು.

ಸಿಆರ್‌ಝಡ್ ಕಾನೂನಿನಲ್ಲಿ ಸಿಆರ್‌ಝಡ್-1 ಮತ್ತು ಸಿಆರ್‌ಝಡ್-2ರ ವ್ಯಾಪ್ತಿಯಲ್ಲಿ ಒಂದು ಚಮಚ ಮರಳನ್ನು ತೆಗೆಯಲು ಅವಕಾಶವಿಲ್ಲ. ಮರಳು ಎಂಬುದು ಜೀವಜಲದ ಮೂಲಸೆಲೆ. ಈಗಾಗಲೇ ಜಿಲ್ಲೆಯ ಹೊಳೆಗಳಿಂದ ಅಕ್ರಮವಾಗಿ 12ರಿಂದ 20 ಅಡಿ ಅಳದವರೆಗೆ ತೆಗೆದಿರುವ ಮರಳು ಮತ್ತೆ ಸಂಗ್ರಹವಾಗಲು ನೂರಾರು ವರ್ಷಗಳು ಬೇಕಾಗುತ್ತದೆ ಎಂದರು.

ತಮಗೆ ಸಿಕ್ಕಿರುವ ಮಾಹಿತಿಗಳಂತೆ ಕರಾವಳಿ ಜಿಲ್ಲೆಗಳಲ್ಲಿ 14,500 ಕೋಟಿ ರೂ.ಗಳ ಮರಳು ಲೂಟಿಯಾಗಿದೆ. ಕಳೆದ ವರ್ಷ ಸಿಆರ್‌ಝಡ್ ವ್ಯಾಪ್ತಿಯೊಂ ದರಲ್ಲೇ 9,87,179 ಮೆಟ್ರಿಕ್ ಟನ್ ಮರಳನ್ನು ಅಧಿಕೃತವಾಗಿ ಹೊರತೆಗೆಯ ಲಾಗಿದೆ.ಅನಧಿಕೃತವಾಗಿ ತೆಗೆದ ಮರಳು ಇದರ ಮೂರ್ನಾಲ್ಕು ಪಟ್ಟು ಇರಬಹುದು. ಜಿಲ್ಲೆಯಲ್ಲಿ ಇದರ ಅರ್ಧದಷ್ಟು ಮರಳು ಬಳಕೆಯಾಗಿಲ್ಲ. ಹಾಗಿದ್ದರೆ, ನಮ್ಮ ಜಿಲ್ಲೆಯಲ್ಲಿ ತೆಗೆದ ಮರಳು ಹೋಗಿದ್ದಾದರೂ ಎಲ್ಲಿಗೆ ಎಂದವರು ಪ್ರಶ್ನಿಸಿದರು.

ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳು ತೆಗೆಯಲು ಅವಕಾಶ ಇಲ್ಲದೇ ಇದ್ದರೂ, ಒಂದೇ ಒಂದು ಕಾರಣಕ್ಕೆ ಇದರಲ್ಲಿ ರಿಯಾಯಿತಿಯನ್ನು ನೀಡಲಾ ಗುತ್ತದೆ. ಮರಳಿನ ಸಂಗ್ರಹದಿಂದ ಮೀನುಗಾರಿಕಾ ದೋಣಿಗಳಿಗೆ ಸಂಚರಿಸಲು ಅಡಚಣೆ ಉಂಟಾದರೆ ಮಾತ್ರ ಅಲ್ಲಿನ ಮರಳನ್ನು ತೆಗೆಯಲು ಅವಕಾಶವಿದೆ. ಆದರೆ ಈ ಮರಳನ್ನು ಮೀನುಗಾರಿಕಾ ವೃತ್ತಿಯವರು ಮಾತ್ರ, ನಾಡದೋಣಿಗ ಳನ್ನು ಬಳಸಿ, ಸಾಂಪ್ರದಾಯಿಕ ಪದ್ಧತಿಯಂತೆ ಮರಳು ತೆಗೆಯಲು ಅವಕಾಶ ನೀಡಲಾಗುತ್ತದೆ. ಅದಕ್ಕೂ ಮರಳು ದಿಬ್ಬಗಳನ್ನು ಗುರುತಿಸಿ, ಅವುಗಳ ತೆರವಿಗೆ ಅಧಿಕೃತ ಪರವಾನಿಗೆ ನೀಡಬೇಕಾಗುತ್ತದೆ ಎಂದು ಶಶಿಧರ ಶೆಟ್ಟಿ ತಿಳಿಸಿದರು.
ಆದರೆ ಇಂದು ಸಾಂಪ್ರದಾಯಿಕ ಮರಳುಗಾರರ ಹೆಸರಿನಲ್ಲಿ ಪರವಾನಿಗೆ ಯನ್ನು ಪಡೆದು, ಒಂದೇ ಲೈಸನ್ಸ್‌ನ್ನು ನಾಲ್ಕೈದು ಜನಕ್ಕೆ ಮಾರಾಟ ಮಾಡಿ, ಅವರು ಇಡೀ ಪ್ರದೇಶದ ಮರಳನ್ನು ದೋಚಿ ಮಾರಾಟ ಮಾಡುತಿದ್ದಾರೆ. ಇದಕ್ಕಾಗಿ ಉತ್ತರ ಪ್ರದೇಶ ಹಾಗೂ ಬಿಹಾರದ ಕಾರ್ಮಿಕರನ್ನು ಬಳಸಿ ಕೊಳ್ಳಲಾಗುತ್ತಿದೆ. ಇವರು ದೊಡ್ಡ ದೊಡ್ಡ ದೋಣಿಗಳನ್ನು ಬಳಿಸಿಕೊಂಡು ಒಂದೆರಡು ಅಡಿ ಅಳಕ್ಕೆ ದೊರೆತ ಪರವಾನಿಗೆಯಿಂದ 20-30ಅಡಿ ಆಳದ ಮರಳನ್ನು ದೋಚುತಿದ್ದಾರೆ ಎಂದರು.

ಜಿಲ್ಲೆಯ ನದಿಗಳಲ್ಲಿರುವ ಮರಳಿನ ಹಗಲುದರೋಡೆಯಿಂದ ಇಂದು ಸಾಂಪ್ರದಾಯಿಕ ಮರಳುಗಾರಿಕೆ ಸಂಪೂರ್ಣವಾಗಿ ನಿಂತಿದೆ. ಅದೇ ರೀತಿ ನದಿಯಲ್ಲಿ ಜನರಿಗೆ ದೊರೆಯುತಿದ್ದ ಮರುವಾಯಿ, ಏಡಿ, ಸಿಗಡಿ ಹಾಗೂ ಹಲವು ಜಾತಿಯ ಮೀನುಗಳು ಸಂಪೂರ್ಣವಾಗಿ ನಶಿಸಿಹೋಗಿವೆ. ಹೊಳೆಗಳಲ್ಲಿ ಮತ್ತೆ ಮರಳು ಸಂಗ್ರಹವಾಗಲು ಇನ್ನು ಒಂದು ಸಾವಿರ ವರ್ಷವಾದರೂ ಬೇಕಾಗುತ್ತದೆ. ಈಗಾಗಲೇ ನದಿಗಳಿಗೆ ಅಣೆಕಟ್ಟು ಕಟ್ಟುತ್ತಿರುವುದರಿಂದ ಮಳೆಗಾಲದಲ್ಲಿ ಪ್ರವಾಹದೊಂದಿಗೆ ಮರಳು ಬಾರದೇ, ಕೇವಲ ಕೆಸರು ಬರುತ್ತದೆ ಎಂದವರು ನುಡಿದರು.

ಧರಣಿ ಎಂಬ ನಾಟಕ: ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಮರಳುಗಾರಿಕೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಶಾಸಕ ಕೆ.ರಘುಪತಿ ಭಟ್ ನೇತೃತ್ವದಲ್ಲಿ ಅಕ್ರಮ ಮರಳುಗಾರಿಕೆ ನಡೆಸಿದವರು ಧರಣಿ ಕುಳಿತಿದ್ದನ್ನು ಟೀಕಿಸಿದ ಶಶಿಧರ್, ಸಿಆರ್‌ಝಡ್ ಕಾನೂನನ್ನು ಜಿಲ್ಲಾಧಿಕಾರಿಯವರು ಬದಲಿಸಲು ಅಥವಾ ಉಲ್ಲಂಘಿಸಲು ಸಾಧ್ಯವಿಲ್ಲ ಎಂಬ ಕಾಮನ್‌ಸೆನ್ಸ್ ಸಹ ಇಲ್ಲದೇ ಧರಣಿ ನಿರತರು ಮಾತನಾಡಿದರು ಎಂದರು. ಇಂಥ ಮರಳು ಮಾಫಿಯಾದವರ ಪರವಾಗಿ ಪ್ರಕೃತಿ ಪರವಾಗಿ ಹೋರಾಟ ನಡೆಸುವ ಪೇಜಾವರಶ್ರೀಗಳಂಥವರು ಬಂದು ಬೆಂಬಲಿಸಿದ್ದು ಅತ್ಯಂತ ಖೇಧಕರ ಎಂದರು.
ರಾಷ್ಟ್ರೀಯ ಹಸಿರು ಪೀಠದಂಥ ಅತ್ಯಂತ ಮಹತ್ವದ ಸಂಸ್ಥೆಯನ್ನು ಕೇಂದ್ರ ಸರಕಾರ ದುರ್ಬಲಗೊಳಿಸಲು ಮುಂದಾಗಿದೆ ಎಂದು ಟೀಕಿಸಿದ ಅವರು, ಕಳೆದ ಒಂದೂವರೆ ವರ್ಷದಿಂದ ಇದಕ್ಕೆ ನ್ಯಾಯಧೀಶರನ್ನು ನೇಮಿಸದೇ ಕೇಂದ್ರ ಸರಕಾರ ವಿಳಂಬ ನೀತಿಯನ್ನು ಅನುಸರಿಸುತ್ತಿದೆ ಎಂದರು.

ಏನೇ ಇದ್ದರೂ ಸಿಆರ್‌ಝಡ್‌ಗೆ ಸಂಬಂಧಿಸಿದ ಕಾನೂನು ಅತ್ಯಂತ ಪ್ರಬಲ ವಾಗಿದ್ದು, ಈಗಾಗಲೇ ಮರಳನ್ನು ದೋಚಿದವರು, ಅದಕ್ಕೆ ನೆರವಾದ ಅಧಿಕಾರಿ ಗಳು ಖಂಡಿತ ನ್ಯಾಯಾಲಯದಿಂದ ಶಿಕ್ಷೆ ಅನುಭವಿಸಿಯೇ ಅನುಭವಿಸುತ್ತಾರೆ. ಈಗಾಗಲೇ ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿದ ದಾವೆ ಹಸಿರು ಪೀಠದಲ್ಲಿ ವಿಚಾರಣೆ ಹಂತದಲ್ಲಿದ್ದು, ಅಲ್ಲಿ ಖಂಡಿತ ತಪ್ಪಿತಸ್ಥರಿಗೆ ಶಿಕ್ಷೆ ಕಾದಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.

ಉಡುಪಿ ಜಿಲ್ಲೆಯಲ್ಲಿ ಮರಳು ದಿಬ್ಬಗಳ ತೆರವಿಗೆ ಪರವಾನಿಗೆ ಕೋರಿ ಅರ್ಜಿ ಸಲ್ಲಿಸಿದ ವ್ಯಕ್ತಿಗಳಿಗೆ ಪರವಾನಿಗೆ ನೀಡುವುದಕ್ಕೆ ತಮ್ಮ ಆಕ್ಷೇಪಗಳಿವೆ ಎಂದ ಅವರು, ಈ ಬಗ್ಗೆ ಈಗಾಗಲೇ ಜಿಲ್ಲಾದಿಕಾರಿಗಳಿಗೆ ಮನವಿ ಸಲ್ಲಿಸಿ ನಮ್ಮ ಆಕ್ಷೇಪಗಳನ್ನು ಸಲ್ಲಿಸಿದ್ದೇವೆ ಎಂದು ಶಶಿಧರ ಶೆಟ್ಟಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಸದಸ್ಯರಾದ ನಾರಾಯಣ ಬಂಗೇರ, ಪ್ರೇಮಾನಂದ ಕಲ್ಮಾಡಿ, ಭಾಸ್ಕರ ಶೆಟ್ಟಿ, ರಾಘವೇಂದ್ರ ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X