ನ.6ರಂದು ‘ಸಂಪೂರ್ಣ ದಿವ್ಯ ದರ್ಶನಂ’ ಬಿಡುಗಡೆ
ಉಡುಪಿ, ನ.5: ಮುಂಬೈ ಕಲಾ ಸೌರಭ ಇದರ ರಜತ ವರ್ಷಾಚರಣೆಯ ದ್ವಿತೀಯ ಕಾರ್ಯಕ್ರಮವಾಗಿ ಪುಣ್ಯ ಕ್ಷೇತ್ರಗಳ ಪರ್ಯಟನ ದೃಶ್ಯ ಹಾಗೂ ಗೀತಾ ನೃತ್ಯ ವೈಭವದ ವೀಡಿಯೋ- ಆಡಿಯೋ ‘ಸಂಪೂರ್ಣ ದಿವ್ಯ ದರ್ಶನಂ’ ಬಿಡುಗಡೆ ಸಮಾರಂಭವು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ.
ನ.6ರಂದು ಸಂಜೆ 7ಗಂಟೆಗೆ ವೀಡಿಯೋ ಆಡಿಯೋವನ್ನು ಪರ್ಯಾಯ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಬಿಡುಗಡೆ ಮಾಡಲಿರುವರು ಎಂದು ಸಂಯೋಜಕರಾದ ಪರಮಾನಂದ ಸಾಲಿಯಾ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಮುಂಬೈ ಹಾಗೂ ಕರ್ನಾಟಕ ಕರಾವಳಿಯ ಕಲಾವಿದರಿಂದ ರಾಗ ನಾಟ್ಯ ಸಾಂಸ್ಕೃತಿಕ ಸಂಭ್ರಮ ಜರಗಲಿದ್ದು, ಇದರಲ್ಲಿ ಉಡುಪಿ ಸೃಷ್ಠಿ ನೃತ್ಯ ಕಲಾ ಕುಟೀರದ ಡಾ.ಮಂಜರಿಚಂದ್ರ ಬಳಗದಿಂದ ಭರತನಾಟ್ಯ ದಶಾವತಾರ ರೂಪಕ, ಕಲಾವತಿ ದಯಾನಂದ್ ಹಾಗೂ ಜಗದೀಶ್ ಪುತ್ತೂರು ಅವರಿಂದ ಭಕ್ತಿಗೀತೆ ಜಾನಪದ ಸಂಗೀತ ಮತ್ತು ಯಕ್ಷಗಾನ, ಭಾವನೃತ್ಯ ಸಂಗಮ ಜರಗ ಲಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಯೋಜಕರಾದ ಪದ್ಮನಾಭ ಸಸಿಹಿತ್ಲು ಮುಂಬೈ, ಸುಧಾಕರ ಆಚಾರ್ಯ ಉಡುಪಿ, ಕಲಾವತಿ ದಯಾನಂದ್, ಡಾ.ಮಂಜರಿ ಚಂದ್ರ ಉಪಸ್ಥಿತರಿದ್ದರು.





