Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಚಿಕ್ಕಮಗಳೂರು ಜಿಪಂ ಸಾಮಾನ್ಯ ಸಭೆ:...

ಚಿಕ್ಕಮಗಳೂರು ಜಿಪಂ ಸಾಮಾನ್ಯ ಸಭೆ: ಪ್ರತಿಧ್ವನಿಸಿದ ಜಾಬ್‍ ಕಾರ್ಡ್ ಹಗರಣ, ಪೊಲೀಸರ ಹಲ್ಲೆ ಪ್ರಕರಣ

ಶಿಸ್ತುಕ್ರಮಕ್ಕೆ ಗುರಿಯಾದ ನೌಕರನ ಪರ 20 ಸಾವಿರ ಸಂಗ್ರಹಿಸಿದ ಸದಸ್ಯರು

ವಾರ್ತಾಭಾರತಿವಾರ್ತಾಭಾರತಿ5 Nov 2018 8:48 PM IST
share
ಚಿಕ್ಕಮಗಳೂರು ಜಿಪಂ ಸಾಮಾನ್ಯ ಸಭೆ: ಪ್ರತಿಧ್ವನಿಸಿದ ಜಾಬ್‍ ಕಾರ್ಡ್ ಹಗರಣ, ಪೊಲೀಸರ ಹಲ್ಲೆ ಪ್ರಕರಣ

ಚಿಕ್ಕಮಗಳೂರು, ನ.5: ಜಿಲ್ಲಾ ಪಂಚಾಯತ್‍ನ ನಝೀರ್ ಸಾಬ್ ಸಭಾಂಗಣದಲ್ಲಿ ಸೋಮವಾರ ನಡೆದ ಸರ್ವ ಸದಸ್ಯರ ಸಾಮಾನ್ಯಸಭೆಯಲ್ಲಿ ನಗರ ಠಾಣೆಯ ಪೊಲೀಸರು ಜಿಪಂ ಮಾಜಿ ಸದಸ್ಯರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಹಾಗೂ ಜಿಪಂನಲ್ಲಿ ನಡೆದಿರುವ ಜಾಬ್ ಕಾರ್ಡ್ ಹಗರಣದ ಬಗ್ಗೆ ಬಿರುಸಿನ ಚರ್ಚೆ, ವಾಗ್ವಾದಗಳು ಪ್ರತಿಧ್ವನಿಸಿದವು.

ಸಭೆಯ ಆರಂಭದಲ್ಲಿ ಜಿಪಂ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಅರೇಕುಡಿಗೆ ಶಿವಣ್ಣ ಅವರ ಮೇಲೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ನಗರ ಠಾಣೆಯ ಪಿಎಸ್ಸೈ ಸೇರಿದಂತೆ ಎಸ್ಸೈ ಹಾಗೂ ಪೇದೆಗಳು ಇತ್ತೀಚೆಗೆ ಹಲ್ಲೆ ನಡೆಸಿರುವ ವಿಷಯವನ್ನು ಮೂಡಿಗೆರೆ ತಾಪಂ ಅಧ್ಯಕ್ಷ ಕೆ.ಸಿ.ರತನ್ ಪ್ರಸ್ತಾಪಿಸಿ, ಹಲ್ಲೆ ನಡೆದು ತಿಂಗಳು ಕಳೆದಿದ್ದರೂ ಪೊಲೀಸರ ವಿರುದ್ಧ ಇದುವರೆಗೂ ಯಾವುದೇ ಕ್ರಮವಹಿಸಿಲ್ಲ. ಪ್ರಕರಣದ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕಾದ ಎಸ್ಪಿ, ಪೊಲೀಸರ ಮನೋಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುವುದಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತ ಜನಪ್ರತಿನಿಧಿಯೊಬ್ಬರ ಹಲ್ಲೆ ಪ್ರಕರಣದ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ಹಲ್ಲೆಗೊಳಗಾದವರನ್ನೇ ತಪ್ಪಿತಸ್ಥರನ್ನಾಗಿಸುವ ಹುನ್ನಾರ ನಡೆಸಿದ್ದಾರೆ. ಪೊಲೀಸರ ಈ ದರ್ಪವನ್ನು ಸಹಿಸಲು ಸಾಧ್ಯವಿಲ್ಲ. ನಾಳೆ ನಮಗೂ ಇದೇ ಪರಿಸ್ಥಿತಿ ಬಂದರೂ ಆಶ್ಚರ್ಯವಿಲ್ಲ. ಹಲ್ಲೆ ಮಾಡಿದ ಪೊಲೀಸರ ವಿರುದ್ಧ ಕಾನೂನು ಕ್ರಮಕೈಗೊಳ್ಳದಿದ್ದಲ್ಲಿ ಸಭೆಯನ್ನು ಬಹಿಷ್ಕರಿಸವುದಾಗಿ ಎಚ್ಚರಿಕೆ ನೀಡಿದರು.

ಇದಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಬಣಕಲ್ ಕ್ಷೇತ್ರದ ಜಿಪಂ ಸದಸ್ಯ ಶ್ಯಾಮಣ್ಣ, ಕಾನೂನು ಉಲ್ಲಂಘಿಸಿದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಬೇಕು. ಆದರೆ ಶಿವಣ್ಣ ಅವರ ಪ್ರಕರಣದಲ್ಲಿ ಪೊಲೀಸರು ಕಾನೂನು ಉಲ್ಲಂಘಿಸಿದ್ದಾರೆ. ಪೊಲೀಸರಿಗೆ ಹಲ್ಲೆ ಮಾಡುವ ಅಧಿಕಾರ ನೀಡಿದ್ದು ಯಾರು? ಹಲ್ಲೆಗೊಳಗಾದವರ ಮೇಲೆಯೇ ಎಫ್‍ಐಆರ್ ಹಾಕಿರುವುದು ಯಾವ ಕಾನೂನು? ಎಂದು ಪ್ರಶ್ನಿಸಿ, ಪೊಲೀಸರ ಕೃತ್ಯ ಖಂಡನೀಯ. ಎಸ್ಪಿ ಅವರನ್ನು ಸಭೆಗೆ ಕರೆಸಿ, ತಪ್ಪಿದಲ್ಲಿ ಎಲ್ಲ ಸದಸ್ಯರು ಸಭೆಯನ್ನು ಬಹಿಷ್ಕರಿಸುವುದಾಗಿ ಹೇಳಿದರು. ಇದಕ್ಕೆ ಬಿಜೆಪಿ ಸದಸ್ಯರಾದ ಸೋಮಶೇಖರ್, ಶೃಂಗೇರಿ ಶಿವಣ್ಣ, ಕಾಂಗ್ರೆಸ್ ಸದಸ್ಯರಾದ ಕೆ.ಆರ್.ಪ್ರಭಾಕರ್, ಮಹೇಶ್ ಒಡೆಯರ್ ಸೇರಿದಂತೆ ಮಹಿಳಾ ಸದಸ್ಯರು ಪಕ್ಷಾತೀತವಾಗಿ ಧ್ವನಿಗೂಡಿಸಿದರು. 

ಈ ವೇಳೆ ಕೆಎಸ್ಸಾರ್ಟಿಸಿ ವಿಭಾಗ ಸಾರಿಗೆ ಅಧಿಕಾರಿ, ಘಟನೆ ಸಂಬಂಧ ಸಿಸಿ ಟಿವಿ ದಾಖಲೆಗಳನ್ನು ಪರಿಶೀಲಿಸಿ ಅಧಿಕಾರಿಗಳ ಸಭೆ ನಡೆಸುವುದಾಗಿ ಹೇಳಿದರು. ಇದಕ್ಕೆ ಶ್ಯಾಮಣ್ಣ, ರತನ್ ಸಭೆಯಲ್ಲಿ ಗದ್ದಲ ಎಬ್ಬಿಸಿ ಎಸ್ಪಿ ಅವರನ್ನು ಸಭೆಗೆ ಕರೆಸುವಂತೆ ಪಟ್ಟು ಹಿಡಿದರು. ಮಧ್ಯ ಪ್ರವೇಶಿಸಿ ಮಾತನಾಡಿದ ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಪ್ರಕರಣ ಸಂಬಂಧ ಎಸ್ಪಿ ಅವರಿಗೆ ಸಭೆಗೆ ಹಾಜರಾಗಲು ಸೂಚನೆ ನೀಡಿದ್ದರೂ ಬಂದಿಲ್ಲ. ಪೊಲೀಸರ ಅಮಾನತಿಗೆ ನಿರ್ಣಯ ಕೈಗೊಂಡು ಸರಕಾರವನ್ನು ಆಗ್ರಹಿಸಲಾಗುವುದು ಎಂದು ಸ್ಪಷ್ಟನೆ ನೀಡಿದರು. ಉಪಾಧ್ಯಕ್ಷ ಆನಂದಪ್ಪ ಮಾತನಾಡಿ, ಸಭೆಗೆ ಎಸ್ಪಿ ಬಾರದಿದ್ದಲ್ಲಿ ನಿರ್ಣಯ ಕೈಗೊಂಡ ಬಳಿಕ ನಾವೇ ಎಸ್ಪಿ ಅವರನ್ನು ಭೇಟಿ ಮಾಡಿ ಚರ್ಚಿಸೋಣ ಎನ್ನುವ ಮೂಲಕ ಸಭೆಯ ಬಿಸಿ ವಾತಾವರಣವನ್ನು ತಿಳಿಗೊಳಿಸಿದರು.

ಬಳಿಕ ನಡೆದ ಚರ್ಚೆಯಲ್ಲಿ ಶರತ್ ಕೃಷ್ಣಮೂರ್ತಿ ಜಾಬ್‍ಕಾರ್ಡ್ ಹಗರಣವನ್ನು ಕೆದಕಿದರು. ಜಾಬ್‍ಕಾರ್ಡ್‍ಗಳ ಮುದ್ರಣದ ಗುತ್ತಿಗೆಯನ್ನು ತಮಗೆ ಬೇಕಾದವರಿಗೆ ನೀಡುವ ಮೂಲಕ ಸರಕಾರಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಈ ಹಗರಣದಲ್ಲಿ ಲಕ್ಷಾಂತರ ರೂ. ಸರಕಾರದ ಹಣವನ್ನು ಲೂಟಿ ಮಾಡಲಾಗಿದೆ. ಇದರ ತನಿಖೆಗಾಗಿ ನೇಮಿಸಿದ ಸಮಿತಿ ನಾಮಕಾವಸ್ಥೆಗೆ ಎಂಬಂತಿದೆ. ಟೆಂಡರ್ ನಲ್ಲಿ ಭಾಗವಹಿಸಿದ್ದ ನಾಲ್ಕು ಮುದ್ರಣ ಸಂಸ್ಥೆಗಳ ಪೈಕಿ ತಾಂತ್ರಿಕ ಬಿಡ್‍ನಲ್ಲಿ ಆಯ್ಕೆಯಾಗದ ಮುದ್ರಣ ಸಂಸ್ಥೆಗೆ ಹಣಕಾಸು ಬಿಡ್‍ನಲ್ಲಿ ಭಾಗವಹಿಸಲು ಬಿಟ್ಟಿರುವುದರಲ್ಲಿ ಭಾರೀ ಅವ್ಯವಹಾರ ನಡೆದಿದೆ. ಸಿಇಒ ಹಾಗೂ ಜಿಪಂ ಉಪ ಕಾರ್ಯದರ್ಶಿ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಲೋಕಾಯುಕ್ತ ತನಿಖೆಯಾಗಬೇಕೆಂದು ಪಟ್ಟು ಹಿಡಿದರು. ಇದಕ್ಕೆ ಶ್ಯಾಮಣ್ಣ, ಮಹೇಶ್ ಸೇರಿದಂತೆ ಕೆಲ ಸದಸ್ಯರು ಬೆಂಬಲ ಸೂಚಿಸಿ ಮಾತನಾಡಿದರು.

ಶರತ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಇಒ, ಸರಕಾರದ ನಿಯಮದಂತೆ ಟೆಂಡರ್ ಕರೆದು ಗುತ್ತಿಗೆ ನೀಡಲಾಗಿದೆ. ಅತೀ ಕಡಿಮೆ ದರದಲ್ಲಿ ಮುದ್ರಣ ಮಾಡುವ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ ಎಂದು ಸಮಜಾಯಿಸಿ ನೀಡಿದರು. ಇದಕ್ಕೆ ಸದಸ್ಯರು ಆಕ್ರೋಶಗೊಂಡು ಗದ್ದಲ ಎಬ್ಬಿಸಿದರು. ಈ ಮಧ್ಯೆ ಜಿಪಂ ಉಪ ಕಾರ್ಯದರ್ಶಿ ಸ್ಪಷ್ಟನೆ ನೀಡಿದರೂ ಸದಸ್ಯರು ಸಮಾದಾನಗೊಳ್ಳಲಿಲ್ಲ. ಸಿಇಒ ಡಿಎಸ್ ಪರ ಬ್ಯಾಟಿಂಗ್ ಮಾಡಿದರಾದರೂ ಪ್ರಯೋಜನವಾಗಲಿಲ್ಲ. ನಂತರ, ಹಗರಣದಲ್ಲಿ ಮೇಲ್ನೋಟಕ್ಕೆ ಉಪಕಾರ್ಯದರ್ಶಿ ಅವರೇ ತಪ್ಪಿತಸ್ಥರೆಂದು ಕಂಡು ಬರುತ್ತಿದ್ದು, ಅವರ ವಿರುದ್ಧ ಕ್ರಮಕ್ಕೆ ಸರಕಾರಕ್ಕೆ ಪತ್ರ ಬರೆಯುವಂತೆ ಆಗ್ರಹಿಸಿದರು.

ಸಭೆಯಲ್ಲಿ ಅತಿವೃಷ್ಟಿ, ಅನಾವೃಷ್ಟಿ ಪರಿಹಾರ ಅನುದಾನ, ಹೆಚ್ಚು ಅನುದಾನ ಬಿಡುಗಡೆಯಗೆ ಸರಕಾರಕ್ಕೆ ಒತ್ತಡ ಹಾಕುವುದು, ಕೃಷಿ. ತೋಟಗಾರಿಕೆ, ಬೆಳೆ ವಿಮೆ, ಮೆಸ್ಕಾಂ ಇಲಾಖೆ ಪರಿಹಾರ, ಆಡಳಿತದಲ್ಲಿ ಕನ್ನಡ ಬಳಕೆ, ಏಷ್ಯನ್‍ಗೇಮ್ಸ್‍ನಲ್ಲಿ ಪದಕ ಗೆದ್ದ ಅಂಧ ಮಕ್ಕಳಿಗೆ ಸನ್ಮಾನ ಮತ್ತಿತರ ವಿಷಯಗಳ ಚರ್ಚೆಗಳು ನಡೆದವು.

ಸಭೆಯಲ್ಲಿ ಜಿಪಂ ಎಲ್ಲ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಸಭೆಯಲ್ಲೇ 20 ಸಾವಿರ ಹಣ ಸಂಗ್ರಹಿಸಿದ ಸದಸ್ಯರು:
ನಂತರ ನಡೆದ ಜಿಪಂ ನೌಕರರೊಬ್ಬರಿಗೆ ಶಿಸ್ತು ಕ್ರಮದ ನೆಪದಲ್ಲಿ 31 ಸಾವಿರ ರೂ ದಂಡ ವಿಧಿಸಿದ ವಿಷಯದ ಮೇಲೆ ನಡೆದ ಚರ್ಚೆಯ ನಡುವೆ ಜಿಲ್ಲಾ ಪಂಚಾಯತ್‍ನ ಸುಪ್ರೀಂ ಯಾರೆಂಬ ಬಗ್ಗೆ ಸದಸ್ಯರು ಹಾಗೂ ಜಿಪಂ ಸಿಇಒ ಮಧ್ಯೆ ಮಾತಿನ ಚಮಮಕಿಯೇ ನಡೆಯಿತು. ಜಿಪಂ ಕಚೇರಿಯ ದುಬಾರಿ ಜೆರಾಕ್ಸ್ ಯಂತ್ರವೊಂದನ್ನು ಹಾಳು ಮಾಡಿದ ಆರೋಪದ ಮೇರೆಗೆ ಕಚೇರಿ ನೌಕರ ಶಂಕರ್ ಎಂಬವರಿಂದ 31 ಸಾವಿರ ರೂ. ಹಣ ವಸೂಲಿಗೆ ಸಿಇಒ ಆದೇಶ ನೀಡಿರುವುದನ್ನು ಪ್ರಸ್ತಾಪಿಸಿದ ಕಡೂರು ಜಿಪಂ ಕ್ಷೇತ್ರದ ಸದಸ್ಯ ಶರತ್ ಕೃಷ್ಣಮೂರ್ತಿ, ಸಿಇಒ ಸತ್ಯಬಾಮ ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಜೆರಾಕ್ಸ್ ಯಂತ್ರ ಹಾಳು ಮಾಡಿದ್ದಾರೆಂದು ಪೊಲೀಸರನ್ನು ಜಿಪಂ ಕಚೇರಿಗೆ ಕರೆಸಿದ್ದಾರೆ. ಈ ವಿಷಯವನ್ನು ಜಿಪಂ ಅಧ್ಯಕ್ಷರ ಗಮನಕ್ಕೂ ತಂದಿಲ್ಲ. ಜಿಪಂಗೆ ಅಧ್ಯಕ್ಷರೇ ಸುಪ್ರೀಂ, ಅವರ ಗಮನಕ್ಕೆ ತಾರದೇ ತಾವೇ ಸುಪ್ರೀಂ ಎಂಬಂತೆ ವರ್ತಿಸಿದ್ದಾರೆ. ಕಡಿಮೆ ಸಂಬಳ ಪಡೆಯುವ ನೌಕರನ ಮೇಲೆ ಶಿಸ್ತುಕ್ರಮದ ನೆಪದಲ್ಲಿ 31 ಸಾವಿರ ರೂ. ವಸೂಲಿ ಮಾಡಲು ಆದೇಶಿಸಿ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದಾರೆ. ಇದನ್ನೂ ರದ್ದುಗೊಳಿಸಬೇಕೆಂದು ಆಗ್ರಹಿಸಿದರು. ಇದಕ್ಕೆ ಧನಿಗೂಡಿಸಿದ ಜಿಪಂ ಸದಸ್ಯರಾದ ರಾಮಸ್ವಾಮಿ, ಶ್ಯಾಮಣ್ಣ ಮತ್ತಿತರರು, ಜಿ.ಪಂಚಾಯತ್‍ಗೆ ಅಧ್ಯಕ್ಷರೇ ಸುಪ್ರೀಂ. ಈ ವಿಚಾರವನ್ನು ಅಧ್ಯಕ್ಷರ ಗಮನಕ್ಕೆ ತರಬೇಕಿತ್ತು. ಜಿಪಂನಲ್ಲಿ ಪೊಲೀಸರು ಬರಲು ಇಲ್ಲೇನು ಕೊಲೆಯಾಗಿದೆಯಾ ಎಂದು ಗುಡುಗಿದರು. ಇದಕ್ಕೆ ವಿರೋಧ ಪಕ್ಷಗಳ ಸದಸ್ಯರೂ ಧನಿಗೂಡಿಸಿದರು.

ಇದಕ್ಕೆ ಪ್ರತಿಕ್ರಿಯಸಿದ ಸಿಇಒ, ಜೆರಾಕ್ಸ್ ಯಂತ್ರ ಹಾಳು ಮಾಡಿರುವುದನ್ನು ಪೊಲೀಸರ ಮುಂದೆ ನೌಕರ ಒಪ್ಪಿಕೊಂಡಿದ್ದಾರೆ. ಆಡಳಿತಾತ್ಮಕ ವಿಷಯ ಸಂಬಂಧ ಇದನ್ನು ಅಧ್ಯಕ್ಷರಿಗೆ ತಿಳಿಸಬೇಕಿಲ್ಲ. ತನ್ನ ವ್ಯಾಪ್ತಿಯ ಅಧಿಕಾರ ಬಳಸಿ ಹಣ ವಸೂಲಿ ಮಾಡುತ್ತಿದ್ದೇನೆ. ಈ ವಿಷಯದಲ್ಲಿ ಶಿಸ್ತುಕ್ರಮ ಅನಿವಾರ್ಯ. ಇದನ್ನು ರದ್ದು ಮಾಡುವ ಪ್ರಶ್ನೆಯೇ ಇಲ್ಲ ಎಂದು ಪಟ್ಟು ಹಿಡಿದರು. ಈ ವೇಳೆ ಸದಸ್ಯರು ಮತ್ತು ಸಿಇಒ ನಡುವೆ ಮಾತಿನ ಚಕಮಕಿ ನಡೆಯಿತು. ಸಿಇಒ ಹಣ ವಸೂಲಿ ಕೈಬಿಡಲಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದಾಗ ಸದಸ್ಯರು ನೌಕರನಿಂದ ವಸೂಲಿ ಮಾಡುವ ಹಣವನ್ನು ತಾವೇ ಪಾವತಿಸುವುದಾಗಿ ಹೇಳಿದರು. ಆಗ ಎಲ್ಲ ಸದಸ್ಯರೂ 500, 1000 ನೀಡಿದರು. ಸಂಗ್ರಹವಾದ 20 ಸಾವಿರ ರೂ. ಅನ್ನು ಸಿಇಒ ಅವರಿಗೆ ಒಪ್ಪಿಸಿ ಆಕ್ರೋಶ ವ್ಯಕ್ತಪಡಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X