ಉದ್ಯೋಗಿನಿ ಯೋಜನೆ: ಅರ್ಜಿ ಆಹ್ವಾನ
ಉಡುಪಿ, ನ.5: ಉದ್ಯೋಗಿನಿ ಯೋಜನೆಯಡಿ 2018-19ನೇ ಸಾಲಿನಲ್ಲಿ 18ರಿಂದ 55 ವರ್ಷ ವಯೋಮಿತಿಯ ಮಹಿಳೆಯರು ವ್ಯಾಪಾರ, ಗೃಹ ಕೈಗಾರಿಕೆ, ಟೈಲರಿಂಗ್, ಹೈನುಗಾರಿಕೆ, ಮೀನು ವ್ಯಾಪಾರ, ಸಿದ್ದ ಉಡುಪು ಇತ್ಯಾದಿ ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ರಾಷ್ಟ್ರೀಕೃತ ಬ್ಯಾಂಕ್‌ನಿಂದ ನೀಡಲಾಗುವ ಗರಿಷ್ಟ 3 ಲಕ್ಷದ ಸಾಲದ ಮೇಲೆ ಎಸ್‌ಸಿ/ ಎಸ್‌ಟಿ ವರ್ಗಕ್ಕೆ ಶೇ.50 ಅಥವಾ ಗರಿಷ್ಠ 1,50,000 ರೂ. ಸಹಾಯಧನ ಹಾಗೂ ಸಾಮಾನ್ಯ ವರ್ಗ ಮತ್ತು ಅಂಗವಿಕಲರು/ ವಿಧವೆ/ ಸಂಕಷ್ಟ/ ವಿಶೇಷ ವರ್ಗಕ್ಕೆ ಶೇ.30 ಅಥವಾ ಗರಿಷ್ಟ 90,000ರೂ. ಸಹಾಯಧನ ನೀಡಲು ಅರ್ಜಿ ಗಳನ್ನು ಆಹ್ವಾನಿಸಲಾಗಿದೆ.
ಸಂಬಂಧ ಪಟ್ಟ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಉಡುಪಿ/ ಕುಂದಾಪುರ/ ಕಾರ್ಕಳ/ ಬ್ರಹ್ಮಾವರ ಇಲ್ಲಿಂದ ಅರ್ಜಿಗಳನ್ನು ಪಡೆದು, ನ.24 ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಣಿಪಾಲ (ದೂರವಾಣಿ: 0820-2574978) ಇವರನ್ನು ಸಂಪರ್ಕಿಸುವಂತೆ ಇಲಾಖಾ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





