ಭಾರತೀಯ ವಿದ್ಯಾರ್ಥಿಗಳ ವಾಯು ಗುಣಮಟ್ಟ ಅಳೆಯುವ ಆ್ಯಪ್‌ಗೆ ಪ್ರಶಸ್ತಿ

ವಾಶಿಂಗ್ಟನ್, ನ. 5: ದಿಲ್ಲಿಯ ಇಂಜಿನಿಯರಿಂಗ್ ಕಾಲೇಜೊಂದರ ವಿದ್ಯಾರ್ಥಿಗಳ ತಂಡವು ಅಮೆರಿಕದ ಪ್ರತಿಷ್ಠಿತ ಮಾರ್ಕೊನಿ ಸೊಸೈಟಿ ಏರ್ಪಡಿಸಿದ ಸ್ಪರ್ಧೆಯಲ್ಲಿ ಗೆದ್ದಿದೆ. ಸ್ಮಾರ್ಟ್‌ಫೋನ್ ಕ್ಯಾಮರಾಗಳ ಮೂಲಕ ತೆಗೆಯಲಾಗುವ ಚಿತ್ರಗಳನ್ನು ವಿಶ್ಲೇಷಿಸಿ ನಿರ್ದಿಷ್ಟ ಸ್ಥಳದ ಗಾಳಿಯ ಗುಣಮಟ್ಟವನ್ನು ಅಳೆಯುವ ಮೊಬೈಲ್ ಅಪ್ಲಿಕೇಶನ್ (ಆ್ಯಪ್) ಅಭಿವೃದ್ಧಿಪಡಿಸಿರುವುದಕ್ಕಾಗಿ ಅದು ಪ್ರಶಸ್ತಿ ಗೆದ್ದಿದೆ.
ಭಾರತಿ ವಿದ್ಯಾಪೀಠ್ಸ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನ ತನ್ಮಯ್ ಶ್ರೀವಾಸ್ತವ, ಕನಿಶ್ಕ್ ಜೀತ್ ಮತ್ತು ಪ್ರೇರಣಾ ಖನ್ನಾ ವಿನೂತನ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ.
ವಿಜೇತ ತಂಡವು 1,500 ಡಾಲರ್ (ಸುಮಾರು 1.10 ಲಕ್ಷ ರೂಪಾಯಿ) ನಗದು ಬಹುಮಾನವನ್ನು ಗೆದ್ದಿದೆ.
ಅವರು ಅಭಿವೃದ್ಧಿಪಡಿಸಿದ ಅಗ್ಗದ ‘ಏರ್ ರೆಕಗ್ನೈಸರ್’ ಆ್ಯಪ್‌ಗೆ ವಾತಾವರಣದ ಚಿತ್ರಗಳನ್ನು ಅಪ್‌ಲೋಡ್ ಮಾಡಿದರೆ, ಆ ಸ್ಥಳದ ವಾಯು ಗುಣಮಟ್ಟ ಸೂಚ್ಯಂಕವನ್ನು ಅದು ಲೆಕ್ಕಮಾಡುತ್ತದೆ.
Next Story





