ಒಡಿಶಾ: ಎನ್‌ಕೌಂಟರ್‌ಗೆ ಐವರು ಮಾವೋವಾದಿಗಳು ಬಲಿ

ಭುವನೇಶ್ವರ,ನ.5: ಒಡಿಶಾದ ಮಲ್ಕನ್‌ಗಿರಿ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ಗೆ ಐವರು ಮಾವೋವಾದಿಗಳು ಬಲಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಒಡಿಶಾ ಪೊಲೀಸ್ ಮತ್ತು ವಿಶೇಷ ಕಾರ್ಯಾಚರಣೆ ಪಡೆ (ಎಸ್‌ಒಜಿ) ನಡೆಸಿದ ಜಂಟಿ ಕೋಂಬಿಂಗ್ ಕಾರ್ಯಾಚರಣೆಯು ಎನ್‌ಕೌಂಟರ್‌ಗೆ ತಿರುಗಿದ ಪರಿಣಾಮ ಒಬ್ಬ ಮಹಿಳೆಯೂ ಸೇರಿದಂತೆ ಐವರು ಮಾವೋವಾದಿಗಳು ಸಾವನ್ನಪ್ಪಿರುವುದಾಗಿ ಹೆಚ್ಚುವರಿ ಪ್ರಧಾನ ನಿರ್ದೇಶಕ (ಕಾರ್ಯಾಚರಣೆ) ಆರ್.ಪಿ ಕೊಚೆ ತಿಳಿಸಿದ್ದಾರೆ.
ಕಾರ್ಯಾಚರಣೆಯ ವೇಳೆ ಭದ್ರತಾ ಪಡೆ ಮಾವೋವಾದಿಗಳಿಂದ ಎರಡು ರೈಫಲ್‌ಗಳು, ಗ್ರೆನೇಡ್‌ಗಳು ಹಾಗೂ ಇತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಹೆಚ್ಚಿನ ನಿಗಾಯಿಡುವ ಸಲುವಾಗಿ ಗಡಿ ಭದ್ರತಾ ಪಡೆಯ ಮತ್ತು ಎಸ್‌ಒಜಿಯ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಎಡಪಂಥೀಯ ಮಾವೋವಾದಿಗಳ ವಿರುದ್ಧ ಒಡಿಶಾ ಪೊಲೀಸರು ನಡೆಸಿದ ಇಲ್ಲಿಯವರೆಗಿನ ಅತ್ಯಂತ ಸಫಲ ಕಾರ್ಯಾಚರಣೆ ಇದಾಗಿದೆ. ತೀವ್ರವಾದಿಗಳಿಂದ ಅಪಾರ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಪ್ರಧಾನ ನಿರ್ದೇಶಕ ಆರ್.ಪಿ.ಶರ್ಮಾ ತಿಳಿಸಿದ್ದಾರೆ.





