ನ.13: ಬಹರೈನ್ ಕನ್ನಡ ಭವನಕ್ಕೆ ಶಿಲಾನ್ಯಾಸ

ಬಹರೈನ್, ನ.6: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬಹರೈನ್ ಕನ್ನಡ ಭವನಕ್ಕೆ ನ.13ರಂದು ಬೆಳಗ್ಗೆ 6:30ಕ್ಕೆ ಶಿಲಾನ್ಯಾಸಗೈಯಲಿದ್ದಾರೆ.
ಕನ್ನಡ ಕಲೆ, ಭಾಷೆ, ಸಂಸ್ಕೃತಿಗೆ ನಾಲ್ಕು ದಶಕಗಳಿಂದಲೂ ಕೊಲ್ಲಿಯ ಮಣ್ಣಿನಲ್ಲಿ ಕೊಡುಗೆ ನೀಡುತ್ತಾ ಬಂದಿರುವ ರಾಜ್ಯ ಪ್ರಶಸ್ತಿ ವಿಜೇತ ಬಹರೈನ್ ಕನ್ನಡ ಸಂಘದ ವತಿಯಿಂದ ಸುಮಾರು 10 ಕೋ.ರೂ. ವೆಚ್ಚದಲ್ಲಿ ದ್ವೀಪದ ಹೃದಯ ಭಾಗವಾದ ಮನಾಮದಲ್ಲಿ ರಾಜ್ಯ ಸರಕಾರದ ಅನುದಾನದೊಂದಿಗೆ ತಲೆಯೆತ್ತಲಿರುವ ಸುಸಜ್ಜಿತ ಕನ್ನಡ ಭವನದಲ್ಲಿ ವಿಶಾಲವಾದ ಸಭಾಂಗಣವೂ ಸೇರಿದಂತೆ ಎಲ್ಲಾ ರೀತಿಯ ಆಧುನಿಕ ಸೌಲಭ್ಯಗಳು ಒಳಗೊಂಡಿರುತ್ತದೆ.
ಇದು ವಿದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಪ್ರಪ್ರಥಮ ‘ಕನ್ನಡ ಭವನ’ ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ. ಒಂಭತ್ತು ತಿಂಗಳಲ್ಲಿ ಪೂರ್ಣಗೊಳ್ಳಲಿರುವ ಈ ಕನ್ನಡ ಭವನವು ದ್ವೀಪ ರಾಷ್ಟ್ರದಲ್ಲಿ ನೆಲೆಸಿರುವ 20 ಸಾವಿರ ಕನ್ನಡಿಗರ ಹೆಮ್ಮೆಯ ಪ್ರತೀಕವಾಗಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





