ಟಿಪ್ಪು ಜಯಂತಿ ಇಷ್ಟವಿಲ್ಲವೆಂದರೆ, ಬಿಜೆಪಿಯವರು ಮನೆಯಲ್ಲಿರಿ: ಸಿಎಂ ಕುಮಾರಸ್ವಾಮಿ

ಬೆಂಗಳೂರು, ನ. 6: ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜಯಂತಿ ಬಿಜೆಪಿಗೆ ಇಷ್ಟವಿಲ್ಲ ಎಂದರೆ, ಮನೆಯಲ್ಲಿರಿ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಮಂಗಳವಾರ ನಗರದ ಗೃಹ ಕಚೇರಿ ಕೃಷ್ಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಟಿಪ್ಪು ಜಯಂತಿ ವಿಚಾರದಲ್ಲಿ ನಾನು ಎಂದಿಗೂ ವಿರೋಧ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ದೇಶದಲ್ಲಿ ಅನೇಕ ಧರ್ಮ ಜಾತಿಗಳಿವೆ. ಅವರವರ ಜಯಂತಿ ಮಾಡಿಕೊಳ್ಳಲು ಬಿಜೆಪಿ ವಿರೋಧವೇಕೆ ?. ಟಿಪ್ಪು ಜಯಂತಿ ಬಿಟ್ಟು ಶಾಂತಿ ಕದಡುವ ಯತ್ನ ಮಾಡಿದರೆ ಬಿಡುವುದಿಲ್ಲ. ಸಾರ್ವಜನಿಕ ಆಸ್ತಿ ಪಾಸ್ತಿ ನಾಶ ಸರಿಯಲ್ಲ ಎಂದು ಅವರು ಹೇಳಿದರು.
Next Story





