ಬೈಕ್ ಕಳವು ಪ್ರಕರಣ: ಆರು ಮಂದಿ ಸೆರೆ, 15 ಬೈಕ್ ಗಳು ವಶಕ್ಕೆ
ವೈಟ್ ಫೀಲ್ಡ್ ವಿಭಾಗ ಪೊಲೀಸರ ಕಾರ್ಯಾಚರಣೆ

ಬೆಂಗಳೂರು, ನ.5- ಬೈಕ್ ಕಳವು ಪ್ರಕರಣ ಸಂಬಂಧ ನಗರದ ವೈಟ್ ಫೀಲ್ಡ್ ವಿಭಾಗದ ಕೆ.ಆರ್.ಪುರಂ ಠಾಣೆ ಪೊಲೀಸರು, ಕಾರ್ಯಾಚರಣೆ ನಡೆಸಿದ್ದು, ಆರು ಜನರನ್ನು ಬಂಧಿಸಿ, 15 ಬೈಕ್ ಗಳನ್ನು ಜಪ್ತಿ ಮಾಡುವುದಲ್ಲಿ ಯಶಸ್ವಿಯಾಗಿದ್ದಾರೆ.
ರವಿತೇಜ, ಸುಹೈಲ್, ಯುವತೇಜ, ಧರ್ಮತೇಜ ಹಾಗೂ ಯತ್ರಿ ರೆಡ್ಡಿ ಪ್ರಸಾದ್ ಬಂಧಿತ ಆರೋಪಿಗಳೆಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ಹೇಳಿದ್ದಾರೆ.
ಅ. 22ರಂದು ಅಯ್ಯಪ್ಪನಗರ ಬಳಿಯಿಂದ ಪ್ರಕರಣ ಸಂಬಂಧ ಆರೋಪಿ ಯಲ್ಲಪ್ಪ ಲವರಾಜು ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ, ಬೈಕ್ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಬಂಧಿತ ಆರೋಪಿಗಳಿಂದ 24 ಲಕ್ಷ ರೂ. ಮೌಲ್ಯದ 15 ಬೈಕ್ ಗಳನ್ನು ಜಪ್ತಿ ಮಾಡಲಾಗಿದ್ದು, ರಾಮಮೂರ್ತಿ ನಗರ, ಸದಾಶಿವನಗರ, ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಬೈಕ್ ಕಳವು ಪ್ರಕರಣ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
Next Story





