18 ವಾಹನಗಳಿಗೆ ಬೆಂಕಿಯಿಟ್ಟು ಪರಾರಿಯಾದ ಕುಡುಕ!

ಹೊಸದಿಲ್ಲಿ, ನ.6: ಕುಡಿತದ ಮತ್ತಿನಲ್ಲಿ ವ್ಯಕ್ತಿಯೊಬ್ಬ 18 ವಾಹನಗಳಿಗೆ ಬೆಂಕಿಯಿಟ್ಟಿರುವ ಘಟನೆ ದಿಲ್ಲಿಯಲ್ಲಿ ನಡೆದಿದ್ದು, ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಫ್ಯುಯಲ್ ಪೈಪ್ ತೆರೆದು ಆತ ಬೆಂಕಿ ಹಚ್ಚುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆರು ವಾಹನಗಳಿಗೆ ಮೊದಲಿಗೆ ಬೆಂಕಿ ಹಚ್ಚಿದ್ದು, ನಂತರ ಹತ್ತಿರದಲ್ಲಿದ್ದ ಕಾರುಗಳಿಗೂ ಬೆಂಕಿ ಹಚ್ಚಿದ್ದಾನೆ. ಘಟನೆಯ ಮಾಹಿತಿ ಲಭಿಸಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಬೆಂಕಿಗೀಡಾದ ವಾಹನಗಳಲ್ಲಿ 8 ದ್ವಿಚಕ್ರ ವಾಹನಗಳು ಹಾಗು 2 ಕಾರುಗಳು ಸಂಪೂರ್ಣ ಭಸ್ಮವಾಗಿದೆ.
Next Story





