ಮಾಜಿ ಸಚಿವ ಓಂಪ್ರಕಾಶ್ ಕಣಗಲಿ ನಿಧನ
ಬೆಳಗಾವಿ, ನ.6: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಓಂಪ್ರಕಾಶ್ ಕಣಗಲಿ(69) ಅವರು ಮಂಗಳವಾರ ಕೆಎಲ್ ಇ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಓಂಪ್ರಕಾಶ್ ಕಣಗಲಿ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಮಾಜಿ ಕೇಂದ್ರ ಸಚಿವ ಬಿ ಶಂಕರಾನಂದ ಅವರ ಪುತ್ರ ಓಂಪ್ರಕಾಶ್ ಕಣಗಲಿ ಅವರು ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
, ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಸರಕಾರದಲ್ಲಿ ನೀರಾವರಿ ಸಚಿವರಾಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
Next Story





