ಜನಾರ್ದನ ರೆಡ್ಡಿ ಆಪ್ತನಿಗೆ ನಿರೀಕ್ಷಣಾ ಜಾಮೀನು

ಜನಾರ್ದನ ರೆಡ್ಡಿ
ಬೆಂಗಳೂರು,ನ.7: ಆಂಬಿಡೆಂಟ್ ಸಂಸ್ಥೆ ಜೊತೆ ಡೀಲ್ ಪ್ರಕರಣಕ್ಕೆ ಗಣಿಧಣಿ ಜನಾರ್ದನ ರೆಡ್ಡಿ ಆಪ್ತ ಅಲಿ ಖಾನ್ ಗೆ 61ನೇ ಸೆಷನ್ಸ್ ನ್ಯಾಯಾಲಯವು ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.50 ಸಾವಿರ ರೂ. ಬಾಂಡ್ ಮತ್ತು ಒಬ್ಬರ ಶ್ಯೂರಿಟ್ ಆಧಾರದಲ್ಲಿ ನ್ಯಾಯಾಲಯ ಜಾಮೀನು ಮಾಡಿದೆ.
ಈ ನಡುವೆ ಜನಾರ್ದನ ರೆಡ್ಡಿ ಅವರಿಗಾಗಿ ಸಿಸಿಬಿ ಪೊಲೀಸರ ತಂಡ ಶೋಧ ನಡೆಸುತ್ತಿದೆ. ಜನಾರ್ದನ ರೆಡ್ಡಿ ಅವರು ಹೈದರಾಬಾದ್ ನಲ್ಲಿದ್ದಾರೆ ಎಂಬ ಮಾಹಿತಿ ಮೇರೆಗೆ ಡಿಸಿಪಿ ಗಿರೀಶ್ ನೇತೃತ್ವದ ತಂಡ ಅಲ್ಲಿಗೆ ತೆರಳಿದೆ.
Next Story





