ಡಿ.1: ನೆಹರೂ ಮೈದಾನದಲ್ಲಿ ಹುಬ್ಬುರ್ರಸೂಲ್ ಕಾರ್ಯಕ್ರಮ
ಮಂಗಳೂರು, ನ.7: ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡಮಿಯು ಹೊರತರುವ ಸುನ್ನೀ ಸಂದೇಶ ಮಾಸಪತ್ರಿಕೆಯ 17ನೇ ಸಂಭ್ರಮದ ಪ್ರಯುಕ್ತ ಡಿ.1ರಂದು ನಗರದ ನೆಹರೂ ಮೈದಾನದಲ್ಲಿ ‘ಹುಬ್ಬುರ್ರಸೂಲ್’ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಭಾಷಣಗಾರ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಸಂದೇಶ ನೀಡುವರು.
‘ಹುಬ್ಬುರ್ರಸೂಲ್’ ಪ್ರಚಾರಕ್ಕೆ ಸಿರಾಜುದ್ದೀನ್ ಖಾಸಿಮಿ ಬುಧವಾರ ಅಕಾಡಮಿಯ ವ್ಯವಸ್ಥಾಪಕ ಎ.ಎಚ್.ನೌಶಾದ್ ಹಾಜಿಗೆ ಪೋಸ್ಟರ್ ವಿತರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಸಿತಾರ್ ಅಬ್ದುಲ್ ಮಜೀದ್ ಹಾಜಿ, ಎಸ್ಕೆಎಸ್ಸೆೆಸ್ಸೆಫ್ ಟ್ರೆಂಡ್‌ನ ಹಮೀದ್ ಕಣ್ಣೂರ್, ರಿಯಾಝ್ ಫೈಝಿ, ಅಝ್‌ಹರಿ ಉಸ್ತಾದ್ ಮತ್ತಿತರರು ಉಪಸ್ಥಿತರಿದ್ದರು ಎಂದು ಪ್ರಕಟನೆ ತಿಳಿಸಿದೆ.
Next Story





