ನ.11ರಂದು ದೀಪಾವಳಿ ಸೌಹಾರ್ದ ಕೂಟ
ಮಂಗಳೂರು, ನ.7: ಸದ್ಭಾವನಾ ವೇದಿಕೆ ಜಪ್ಪು ವರ್ತುಲದಿಂದ ದೀಪಾವಳಿ ಸೌಹಾರ್ದ ಕೂಟವನ್ನು ನಗರದ ರ್ಮೊನ್ಸ್‌ಗೇಟ್‌ನ ಕಾಸಿಯಾ ಚರ್ಚ್ ಹಾಲ್‌ನಲ್ಲಿ ನ.11ರಂದು ಸಂಜೆ 6:30ಕ್ಕೆ ಆಯೋಜಿಸಲಾಗಿದೆ.
ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಇಂಡಿಯಾ)ನ ಮಾಜಿ ಉಪಾಧ್ಯಕ್ಷ, ಸಿವಿಲ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ ಅಶೋಕ್‌ಕುಮಾರ್ ಬಿ., ಉಡುಪಿಯ ಕೆಥೊಲಿಕ್ ಸಭಾದ ಸಮನ್ವಯ ಸಮಿತಿ ಸಂಚಾಲಕ ವಾಲ್ಟರ್ ಸಿರಿಲ್ ಪಿಂಟೊ, ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಭಾಗವಹಿಸಲಿದ್ದಾರೆ ಎಂದು ಸದ್ಭಾವನಾ ವೇದಿಕೆ ಜಪ್ಪು ವರ್ತುಲ ಪ್ರಧಾನ ಕಾರ್ಯದರ್ಶಿ ಸಾಲಿಹ್ ಮುಹಮ್ಮದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





