ಉಪಚುನಾವಣೆಯ ಗೆಲುವು ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿ: ಉಮರ್ ಫಾರೂಕ್

ಬಂಟ್ವಾಳ, ನ.7: ಉಪಚುನಾವಣೆಯಲ್ಲಿ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಉಳ್ಳಾಲ ಕ್ಷೇತ್ರದ ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಫರಂಗಿಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ, ಐದು ಕ್ಷೇತ್ರಗಳ ಪೈಕಿ ಮೈತ್ರಿಕೂಟದ ಸರಕಾರ ನಾಲ್ಕು ಕ್ಷೇತ್ರದಲ್ಲಿ ವಿಜಯ ಗಳಿಸಿರುವುದು ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಯಾಗಿದೆ ಎಂದರು.
ಈ ಸಂದರ್ಭದಲ್ಲಿ ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಮಾಜಿ ಉಪಾಧ್ಯಕ್ಷ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಶೀರ್ ಪೆರಿಮಾರ್, ಸದಸ್ಯರಾದ ಇಕ್ಬಾಲ್ ಸುಜೀರ್, ಮುಸ್ತಫ ಅಮೆಮಾರ್, ಹುಸೈನ್ ಪಾಡಿ, ಮುಡಿಪು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಮ್ತಿಯಾಝ್ ತುಂಬೆ, ರಫೀಕ್ ಪೇರಿಮಾರ್, ಶೌಕತ್ ಅಲಿ, ಮಜೀದ್ ಪೆರಿಮಾರ್, ಗಫೂರ್ ಫರಂಗಿಪೇಟೆ, ಅಬೂಬಕರ್ ಕುಂಜತ್ಕಳ, ಸಲೀಂ ಫರಂಗಿಪೇಟೆ, ಅಶ್ವದ್ ಫರಂಗಿಪೇಟೆ, ಇಬ್ರಾಹಿಂ ವಳವೂರ್, ಸಲಾಂ ಮಲ್ಲಿ, ಅಹ್ಮದ್ ಪೆರಿಮಾರ್, ಬಾಫಿ ಫರಂಗಿಪೇಟೆ, ಸಿರಾಜ್ ಪೆರಿಮಾರ್, ಅಬೂಬಕರ್ ಅತೀಕ್, ಗ್ರಾಪಂ ಸದಸ್ಯರಾದ ಭಾಸ್ಕರ್ ರೈ, ಕಿಶೋರ್ ಪೂಜಾರಿ ಮತ್ತು ಇಸ್ಮಾಯಿಲ್ ಕುಂಜತ್ಕಕಲ ಹಾಗೂ ಪುದು ವಲಯ ಕಾಂಗ್ರೆಸ್ ಸಮಿತಿಯ ಸದಸ್ಯರು ಹಾಗೂ ಯುವ ಕಾಂಗ್ರೆಸ್ ಸದಸ್ಯರು ಉಪಸ್ಥಿತರಿದ್ದರು.







