ಸ್ವಚ್ಛ, ಹಸಿರು ನಗರದ ಪರಿಕಲ್ಪನೆಯಲ್ಲಿ ಅಭಿಯಾನ

ಮಣಿಪಾಲ, ನ.8: ಮಣಿಪಾಲದ ಸ್ಯಾಂಡ್ ಹಾರ್ಟ್ ಕಲಾವಿದರಾದ ಶ್ರೀನಾಥ್ ಮಣಿಪಾಲ ಮತ್ತು ರವಿ ಹಿರೇಬೆಟ್ಟು ಮಣಿಪಾಲವನ್ನು ಸ್ವಚ್ಛ, ಹಸಿರು ಮತ್ತು ಸುಂದರ ನಗರವನ್ನಾಗಿಸುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಮಣಿಪಾಲ ಮಾಹೆಯ ಆವರಣಗಳಲ್ಲಿ ಜನಜಾಗೃತಿ ಮೂಡಿಸುವ ಸುಂದರ ಕಲಾ ಕೃತಿಗಳನ್ನು ರಚಿಸಿ ಜನತೆಯ ಗಮನಸೆಳೆದಿದ್ದಾರೆ.
ಮಾಹೆಯ ಯೋಜನಾ ನಿರ್ದೇಶಕ ಎಂ.ಸಿ.ಬೆಳ್ಳಿಯಪ್ಪಮತ್ತು ಉಪ ನಿರ್ದೇಶಕ ಐವನ್ ಡಿಸೋಜರ ಮಾರ್ಗದರ್ಶನದಲ್ಲಿ ಈ ಕಲಾಕೃತಿಗಳು ರಚನೆಗೊಂಡಿವೆ.
ಈ ಸಂದರ್ಭದಲ್ಲಿ ಕಲಾವಿದ ಶ್ರೀನಾಥ್ ಮಣಿಪಾಲ ಮಾಹೆಯ ಸ್ವಚ್ಛತಾ ಸಿಬ್ಬಂದಿಗೆ ಮತ್ತು ನಗರಸಭೆಯ ಪೌರ ಕಾರ್ಮಿಕರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮತ್ತು ಮಾಹಿತಿ ನೀಡುವ ಕಾರ್ಯಾಗಾರ ನಡೆಸಿಕೊಟ್ಟರು
Next Story





