ಭಯೋತ್ಪಾದಕನಿಗಿಂತ ಕಡಿಮೆಯಲ್ಲ: ವಿಜಯ್ ಚಿತ್ರ ‘ಸರ್ಕಾರ್’ ವಿರುದ್ಧ ತಮಿಳುನಾಡು ಸಚಿವನ ಆಕ್ರೋಶ

ಚೆನ್ನೈ, ನ.8: ತಮಿಳು ನಟ ಇಳಯದಳಪತಿ ವಿಜಯ್ ಅವರ ‘ಸರ್ಕಾರ್’ ಚಿತ್ರವನ್ನು ತಮಿಳುನಾಡು ಕಾನೂನು ಸಚಿವ ಸಿ.ವಿ. ಶಣ್ಮುಗಂ ‘ಉಗ್ರ ಚಟುವಟಿಕೆ’ಗೆ ಹೋಲಿಸಿದ್ದಾರೆ. “ಈ ಚಿತ್ರದ ಮೂಲಕ ಸಮಾಜದಲ್ಲಿ ಸಂಘರ್ಷ ಸೃಷ್ಟಿಸುವ ಪ್ರಯತ್ನ ಮಾಡಲಾಗಿದೆ. ಇದು ಜನರನ್ನು ಸಂಘರ್ಷಕ್ಕೆ ಪ್ರೇರೇಪಿಸುವ ಭಯೋತ್ಪಾದಕನಿಗಿಂತ ಕಡಿಮೆಯಲ್ಲ” ಎಂದವರು ಹೇಳಿದ್ದಾರೆ.
“ಪ್ರಜಾಪ್ರಭುತ್ವದಿಂದ ಆಯ್ಕೆಯಾದ ಸರಕಾರವನ್ನು ಕೆಳಕ್ಕೆ ಬೀಳಿಸುವ ಪ್ರಯತ್ನ’ಗಳಿಗಾಗಿ ನಟ ಹಾಗು ಚಿತ್ರತಂಡದ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದರು. ಆಕ್ಷೇಪಾರ್ಹ ದೃಶ್ಯಗಳನ್ನು ಕತ್ತರಿಸದೆ ಇದ್ದರೆ ಕ್ರಮ ಕೈಗೊಳ್ಳುವುದಾಗಿ ನಿನ್ನೆ ಮತ್ತೋರ್ವ ಸಚಿವ ಕಡಂಬೂರ್ ಸಿ. ರಾಜು ಎಚ್ಚರಿಕೆ ನೀಡಿದ್ದರು.
Next Story





