ನ.11: ತೀರ್ಪು ಮರು ಪರಿಶೀಲನೆಗೆ ಆಗ್ರಹಿಸಿ ಪ್ರತಿಭಟನೆ
ಶಬರಿಮಲೆ ಪ್ರಕರಣ
ಮಂಗಳೂರು, ನ.9: ಶಬರಿಮಲೆಯ ಸಂಪ್ರದಾಯಕ್ಕೆ ವಿರುದ್ಧವಾಗಿ ಬಂದಿರುವ ಸುಪ್ರೀಂ ಕೋರ್ಟ್‌ನ ತೀರ್ಪು ಮರು ಪರಿಶೀಲನೆಗೆ ಆಗ್ರಹಿಸಿ ಅಯ್ಯಪ್ಪ ಭಕ್ತ ವೃಂದ ಕುಳಾಯಿ ಮತ್ತು ಸುರತ್ಕಲ್ ವಲಯ ವತಿಯಿಂದ ನ.11ರಂದು ಪೂರ್ವಾಹ್ನ 11ಕ್ಕೆ ಸುರತ್ಕಲ್‌ನಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಅಯ್ಯಪ್ಪ ಭಕ್ತ ವೃಂದದ ಮುಖಂಡ ಹಾಗೂ ಮಾಜಿ ಮೇಯರ್ ಗಣೇಶ್ ಸಿ.ಹೊಸಬೆಟ್ಟು ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಬೆಳಗ್ಗೆ 9ಕ್ಕೆ ಕುಳಾಯಿ ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಪ್ರಾರ್ಥನೆ ನಡೆಸಿ ಭಜನೆ ಹಾಗೂ ಚೆಂಡೆ ವಾದನದೊಂದಿಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ಸುರತ್ಕಲ್ ತಲುಪಲಿದ್ದಾರೆ ಎಂದರು.
ಕೋರ್ಟ್ ತೀರ್ಪು ಬಳಿಕ ರೆಹನಾ ಾತಿಮಾ, ಲಿಬಿ, ಕವಿತಾ ಜಕ್ಕಲ್, ಮೇರಿ ಸ್ವೀಟಿ, ಸುಹಾಸಿನಿ ರಾಜ್ ಸಹಿತ 250 ಕ್ಕೂ ಅಧಿಕ ಮಹಿಳೆಯರು ಪೊಲೀಸ್ ಭದ್ರತೆಯೊಂದಿಗೆ ದೇವಸ್ಥಾನ ಪ್ರವೇಶಿಸುವ ವಿಲ ಪ್ರಯತ್ನ ನಡೆಸಿದ್ದಾರೆ. ತನ್ನ ಧರ್ಮದ ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ದೊರಕಿಸಿ ಕೊಡುವ ಔದಾರ್ಯವಿಲ್ಲದ ಕಿಸ್ ಆ್ ಲವ್ ಅಭಿಯಾನದ ಾತಿಮಾ ಹಿಂದು ಧರ್ಮದ ಮಹಿಳೆಯರಿಗೆ ಸ್ವಾತಂತ್ರ್ಯ ದೊರಕಿಸಿ ಕೊಡುವ ನಾಟಕವಾಡುತ್ತಿದ್ದಾರೆ ಎಂದು ಗಣೇಶ್ ಹೊಸಬೆಟ್ಟು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಭಕ್ತ ಭಂದದ ಮುಖಂಡರಾದ ಮಿಥುನ್ ತಣ್ಣೀರುಬಾವಿ, ದಿನೇಶ್, ಚಂದ್ರಶೇಖರ ಕುಳಾಯಿ, ಮೀನಾಕ್ಷಿ ಉಪಸ್ಥಿತರಿದ್ದರು.







