ತೇಜಸ್ವಿಯವರ ಬರವಣಿಗೆಗಳು ಜನ ಸಾಮಾನ್ಯರನ್ನು ತಲುಪಿದೆ: ಸುಮನ ಪ್ರಶಾಂತ್

ಬಂಟ್ವಾಳ, ನ. 9: ತೇಜಸ್ವಿ ಅವರು ಪ್ರಧಾನವಾಗಿ ಜೀವನ ಮುಖಿಯಾದ ಹೊಸ ಸಾಹಿತ್ಯವನ್ನು ರೂಪಿಸುವುದರ ಕಡೆಗೆ ಸಾಗಿದ್ದು. ತೇಜಸ್ವಿ ಯವರ ಆದರ್ಶದ ಬದುಕು ಮತ್ತು ಬರವಣಿಗೆಗಳು ಜನ- ಸಾಮಾನ್ಯರನ್ನು ತಲುಪಿದೆ ಎಂದು ಸಂತ ಫಿಲೋಮಿನ ಕಾಲೇಜಿನ ಕನ್ನಡ ಉಪನ್ಯಾಸಕಿ ಸುಮನ ಪ್ರಶಾಂತ್ ಅಭಿಪ್ರಾಯಪಟ್ಟಿದ್ದಾರೆ.
ಬಂಟ್ವಾಳ ಶ್ರೀವೆಂಕಟರಮಣ ಸ್ವಾಮೀ ಪದವಿ ಪೂರ್ವ ಕಾಲೇಜಿನ ಕನ್ನಡ ಸಂಘದ ಆಶ್ರಯದಲ್ಲಿ ಶುಕ್ರವಾರ ನಡೆದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ "ಕೃಷ್ಣೇಗೌಡನ ಆನೆ ನೀಳ್ಗತೆಯ-ವಿಶ್ಲೇಷಣೆ" ಕುರಿತು ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತಾಡಿದರು.
ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವ್ಯವಸ್ಥೆ ಸರಿಯಾಗಿದ್ದಾಗ ನಾವು ಯಾರನ್ನೂ ದೂಷಿಸಬೇಕಾಗಿಲ್ಲ. ನಮ್ಮಲ್ಲಿರುವ ಲೋಪದೋಷಗಳನ್ನು ನಾವು ಸರಿಪಡಿಸಿಕೊಳ್ಳಬೇಕು. ನಮ್ಮ ಯೋಚನೆಗಳು ಪರಿಶುದ್ಧವಾಗಿರಬೇಕು ಎಂದು ಹೇಳಿದರು.
ಕನ್ನಡ ಸಂಘದ ನಿರ್ದೇಶಕಿ ಅಪರ್ಣ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕಾವ್ಯ ಸ್ವಾಗತಿಸಿ, ಧೀರೇಶ್ ಕುಮಾರ್ ವಂದಿಸಿ, ದಿವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.





