ಜೈಲಿನಲ್ಲಿ ದೊಂಬಿ: ಕನಿಷ್ಠ 27 ಸಾವು

ದುಶಾಂಬೆ (ತಜಿಕಿಸ್ತಾನ್), ನ. 9: ಪೂರ್ವ ತಜಿಕಿಸ್ತಾನದ ಖುಜಂಡ್ ನಗರದ ಅತಿ ಭದ್ರತೆಯ ಜೈಲೊಂದರಲ್ಲಿ ನಡೆದ ದೊಂಬಿಯಲ್ಲಿ ಕನಿಷ್ಠ 25 ಕೈದಿಗಳು ಮತ್ತು ಇಬ್ಬರು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಭದ್ರತಾ ಮೂಲಗಳು ತಿಳಿಸಿವೆ.
ಉಗ್ರವಾದ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದವರನ್ನು ಇಡಲಾಗುತ್ತಿದ್ದ ಜೈಲಿನಲ್ಲಿ ಬುಧವಾರ ಸಂಘರ್ಷ ಸಂಭವಿಸಿತು ಎನ್ನುವುದನ್ನು ಸ್ಥಳೀಯ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಆದರೆ, ಹೆಚ್ಚಿನ ವಿವರಗಳನ್ನು ಅವರು ನೀಡಿಲ್ಲ.
ರಾಜಧಾನಿ ದುಶಾಂಬೆಯಿಂದ ಉತ್ತರಕ್ಕೆ ಸುಮಾರು 300 ಕಿ.ಮೀ. ದೂರದ ಖುಜಂಡ್ ನಗರದಲ್ಲಿರುವ ಜೈಲಿನಲ್ಲಿ ಈ ಹಿಂದೆಯೂ ದೊಂಬಿ ಪ್ರಕರಣಗಳು ನಡೆದಿವೆ.
Next Story





