ಬೆಂಗಳೂರು ವಿವಿ: ನ.24 ರಿಂದ ಪದವಿ ಪರೀಕ್ಷೆಗಳು ಆರಂಭ
ಬೆಂಗಳೂರು, ನ.9: ಪ್ರಸಕ್ತ ಸಾಲಿನ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕ ಪದವಿಯ ಸೆಮಿಸ್ಟರ್ ಸ್ಕೀಮ್, ಸಿಬಿಸಿಎಸ್ ಪರೀಕ್ಷೆಗಳು ನ.24ರಿಂದ ಆರಂಭಗೊಳ್ಳಲಿವೆ.
ಬಿಎ, ಬಿಎಸ್ಸಿ, ಬಿಕಾಂ, ಬಿಬಿಎಂ, ಬಿಬಿಎ, ಬಿಸಿಎ, ಬಿವಿ, ಬಿಎಸ್‌ಡಬ್ಲೂ ಸೇರಿದಂತೆ ಎಲ್ಲಾ ವಿಭಾಗಗಳ ಸೆಮಿಸ್ಟರ್‌ಗಳ ಪರೀಕ್ಷೆಗಳು ಒಂದು ತಿಂಗಳ ಕಾಲ ನಡೆಯಲಿದ್ದು, ಡಿ.24ರಂದು ಮುಕ್ತಾಯಗೊಳ್ಳಲಿವೆ. ಪರೀಕ್ಷೆಯ ಸಂಪೂರ್ಣ ವೇಳಾಪಟ್ಟಿಗಾಗಿ ವಿಶ್ವವಿದ್ಯಾಲಯದ ವೆಬ್‌ಸೈಟ್ http://bangaloreuniversity.ac.in ನಲ್ಲಿ ಲಭ್ಯವಿದೆ ಎಂದು ಪ್ರಕಟನೆ ತಿಳಿಸಿದೆ.
Next Story





