ಕೋಟ: ನವಜಾತ ಶಿಶು ಮೃತ್ಯು
ಕೋಟ, ನ.9: ಐದು ದಿನಗಳ ನವಜಾತ ಶಿಶುವೊಂದು ಮೃತಪಟ್ಟ ಘಟನೆ ನ.7ರಂದು ಸಂಜೆ ವೇಳೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಡೆಕಾರ್ ಗ್ರಾಮದ ಕುಮಾರ್ ಎಂಬವರ ಪತ್ನಿ ಶಾಂತಾ ನ.3ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮನೆಯಲ್ಲಿ ಹಾಲು ಕುಡಿಯುತ್ತಿದ್ದ ಮಗುವಿನಲ್ಲಿ ಪದೇ ಪದೇ ಬಿಕ್ಕಳಿಗೆ ಕಾಣಿಸಿಕೊಂಡಿತ್ತೆನ್ನಲಾಗಿದೆ. ಕೂಡಲೇ ಮಗುವನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ವೈದ್ಯರು ಪರೀಕ್ಷಿಸಿ ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
Next Story