ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಯತ್ನ
ಮಲ್ಪೆ, ನ.9: ವೈಯಕ್ತಿಕ ಕಾರಣದಿಂದ ಮನನೊಂದ ವೃದ್ಧೆಯೊಬ್ಬರು ಮರಣ ಪತ್ರ ಬರೆದಿಟ್ಟು ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಇಂದು ಸಂಜೆ ಮಲ್ಪೆಯಲ್ಲಿ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದವರನ್ನು ರಮಣ ಕೊಡವೂರು(83) ಎಂದು ಗುರುತಿಸ ಲಾಗಿದೆ. ನೀರಿನಲ್ಲಿ ಮುಳುಗುತ್ತಿದ್ದ ವೃದ್ಧೆಯನ್ನು ಮಲ್ಪೆ ಜೀವ ರಕ್ಷದವರು ಕೂಡಲೇ ರಕ್ಷಿಸಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ ಮರಣ ಪತ್ರ ಕೂಡ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
Next Story