ತೆರಿಗೆ ವಂಚನೆ: ಟಿಆರ್‌ಎಸ್ ಸಂಸದನ ಸಂಸ್ಥೆಯ ಮೇಲೆ ದಾಳಿ

ಚೆನ್ನೈ, ನ. 9: ತೆಲಂಗಾಣದ ಆಡಳಿತಾರೂಢ ಟಿಆರ್‌ಎಸ್‌ನ ಸಂಸದನಿಗೆ ಸೇರಿದ ಹಲವು ಸ್ಥಳಗಳಿಗೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ಬಳಿಕ, ಸಂಸದನಿಗೆ ಸಂಬಂಧ ಹೊಂದಿರುವ ರಿಯಲ್ ಎಸ್ಟೇಟ್ 600 ಕೋ. ರೂ. ಬಹಿರಂಗಪಡಿಸದ ಆದಾಯ ಇರುವುದಾಗಿ ಒಪ್ಪಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟಿಆರ್‌ಎಸ್‌ನ ಸಂಸದ ಪಿ. ಶ್ರೀನಿವಾಸ ರೆಡ್ಡಿ ಹಾಗೂ ಅವರ ಕುಟುಂಬದ ಸದಸ್ಯರು ಪಾಲುದಾರರಾಗಿರುವ ಕಂಪೆನಿ ಮೆಸರ್ಸ್ ರಾಘವ ಕನಂಸ್ಟ್ರಕ್ಷನ್ ಎಂದು ಅವರು ಹೇಳಿದ್ದಾರೆ.
2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ರೆಡ್ಡಿ ವೈಎಸ್‌ಆರ್ ಕಾಂಗ್ರೆಸ್‌ನ ಟಿಕೆಟ್‌ನಿಂದ ಸ್ಪರ್ಧಿಸಿ ವಿಜಯಿಯಾಗಿದ್ದರು. ಸಂಸ್ಥೆಗೆ ಸಂಬಂಧಿಸಿದ 16 ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಶೋಧ ಕಾರ್ಯಾಚರಣೆ ನಡೆಸಿತ್ತು. ನಕಲಿ ಮಾರಾಟ ಬಿಲ್ ತೋರಿಸಿ ಹಾಗೂ ಉಪ ಗುತ್ತಿಗೆ ನೀಡಿರುವುದಾಗಿ ಸಂಸ್ಥೆ ಕಳೆದ ಮೂರು ಬಾರಿ ತೆರಿಗೆ ವಂಚಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story





