ಶೂ ಲೇಸ್ ಸೃಷ್ಟಿಸಿದ ಅವಾಂತರ: ಸ್ವಿಮ್ಮಿಂಗ್ ಪೂಲ್ ಗೆ ನುಗ್ಗಿದ ಟ್ರಕ್
ಲಾಸ್ ವೇಗಸ್, ನ.9: ಇಲ್ಲಿನ ಮನೆಯೊಂದರ ಹಿಂದಿರುವ ಖಾಲಿ ಈಜುಕೊಳದಲ್ಲಿ ಟ್ರಕ್ ಒಂದು ಸಿಲುಕಿದ ವಿಲಕ್ಷಣ ಘಟನೆ ವರದಿಯಾಗಿದೆ. ಆರಂಭದಲ್ಲಿ ಪೊಲೀಸರು ತಮಗೆ ಕರೆ ಬಂದಾಗ ಈ ಸುದ್ದಿಯನ್ನು ನಂಬದೇ ಇದ್ದರೂ ಕೊನೆಗೆ ಮನೆಯವರು ಘಟನೆಯ ಫೋಟೋ ಕಳುಹಿಸಿದಾಗ ನಂಬಲೇ ಬೇಕಾಯಿತು. ಅಂದ ಹಾಗೆ ಈ ದೈತ್ಯ ಟ್ರಕ್ ಈಜುಕೊಳ ಹೇಗೆ ಪ್ರವೇಶಿಸಿತು ಅಂತೀರಾ?, ಟ್ರಕ್ ಚಾಲಕನ ಶೂ ಲೇಸ್ ಇದಕ್ಕೆಲ್ಲಾ ಕಾರಣವಂತೆ.
ಟ್ರಕ್ ಚಾಲಕನ ಶೂ ಲೇಸ್ ಆಕ್ಸಿಲರೇಟರ್ನಲ್ಲಿ ಸಿಲುಕಿದ ಕಾರಣ ಈ ಅಪಘಾತ ನಡೆಯಿತೆಂದು ಹೇಳಲಾಗಿದೆ. ಟ್ರಕ್ ಮನೆಯ ಡ್ರೈವ್-ವೇ ಪ್ರವೇಶಿಸಿ ಮನೆಯ ಹಿಂದುಗಡೆ ಸಾಗುತ್ತಿದ್ದಂತೆಯೇ ಅಲ್ಲಿದ್ದ ಒಂದು ಉಬ್ಬು ದಾಟಿ ಹೋಗಲು ಅಸಾಧ್ಯವಾದಾಗ ಚಾಲಕ ಆಕ್ಸಿಲರೇಟರ್ ಒತ್ತಿದ್ದು ಈ ಸಂದರ್ಭ ಶೂ ಲೇಸ್ ಆಕ್ಸಿಲರೇಟರ್ನಲ್ಲಿ ಸಿಲುಕಿ ಟ್ರಕ್ ನೇರವಾಗಿ ಈಜುಕೊಳ ಸೇರಿತ್ತು. ಘಟನೆಯಲ್ಲಿ ಯಾರಿಗೂ ಗಾಯಗಳುಂಟಾಗಿಲ್ಲ. ಟ್ರಕ್ಕನ್ನು ನಂತರ ಕ್ರೇನ್ ಸಹಾಯದಿಂದ ಮೇಲಕ್ಕೆತ್ತಲಾಯಿತು.
Next Story