Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ತನ್ನ ‘ಮೀ ಟೂ’ ಕಥೆ ಹಂಚಿಕೊಂಡ ನಟಿ...

ತನ್ನ ‘ಮೀ ಟೂ’ ಕಥೆ ಹಂಚಿಕೊಂಡ ನಟಿ ನಿಹಾರಿಕಾ ಸಿಂಗ್

ನವಾಝುದ್ದೀನ್,ಸಾಜಿದ್ ಖಾನ್ ಮತ್ತು ಭೂಷಣ್ ಕುಮಾರ್ ವಿರುದ್ಧ ಆರೋಪ

ವಾರ್ತಾಭಾರತಿವಾರ್ತಾಭಾರತಿ10 Nov 2018 8:14 PM IST
share
ತನ್ನ ‘ಮೀ ಟೂ’ ಕಥೆ ಹಂಚಿಕೊಂಡ ನಟಿ ನಿಹಾರಿಕಾ ಸಿಂಗ್

ಮುಂಬೈ,ನ.10: ಚಿತ್ರರಂಗದಲ್ಲಿಯ ತನ್ನ ಮೀ ಟೂ ಅನುಭವಗಳ ಕುರಿತು ಮಾತನಾಡಿರುವ ಮಾಜಿ ಮಿಸ್ ಇಂಡಿಯಾ ಹಾಗೂ ಬಾಲಿವುಡ್ ನಟಿ ನಿಹಾರಿಕಾ ಸಿಂಗ್ ಅವರು ಬಾಲಿವುಡ್ ಗಣ್ಯರಾದ ನವಾಝುದ್ದೀನ್ ಸಿದ್ದಿಕಿ,ಸಾಜಿದ್ ಖಾನ್ ಮತ್ತು ಭೂಷಣ ಕುಮಾರ್ ಅವರ ವಿರುದ್ಧ ಆರೋಪ ಮಾಡಿದ್ದಾರೆ.

ಪತ್ರಕರ್ತೆ ಸಂಧ್ಯಾ ಮೆನನ್ ಅವರು ಈ ‘ಮಿಸ್ ಲವ್ಲಿ’ ನಟಿಯ ಕಥೆಯನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ.

ತನ್ನ ಬದುಕಿನುದ್ದಕ್ಕೂ ಶೋಷಣೆಯ ವಿವಿಧ ರೂಪಗಳನ್ನು ತಾನು ಅನುಭವಿಸಿದ್ದೇನೆ ಮತ್ತು ತಾನು ಮಾಡೆಲಿಂಗ್ ಹಾಗೂ ಚಿತ್ರರಂಗದಲ್ಲಿ ಹೆಸರು ಮಾಡಲು ಮುಂಬೈಗೆ ಬರಲು ನಿರ್ಧರಿಸಿದಾಗ ತನ್ನ ಮುಖ್ಯ ಹೋರಾಟ ಆರಂಭಗೊಂಡಿತ್ತು ಎಂದು ನಿಹಾರಿಕಾ ಹೇಳಿದ್ದಾರೆ.

ತಾನು ಮಿಸ್ ಇಂಡಿಯಾ ಕಿರೀಟವನ್ನು ಧರಿಸಿದ್ದ ಬೆನ್ನಲ್ಲೇ ರಾಜ್ ಕನ್ವರ್‌ರ ಚಿತ್ರಕ್ಕೆ ಆಯ್ಕೆಯಾಗಿದ್ದೆ. ಆದರೆ ಆ ಚಿತ್ರದ ನಿರ್ಮಾಣ ಪ್ರಸ್ತಾವ ಅಲ್ಲಿಗೇ ಸ್ಥಗಿತಗೊಂಡಿತ್ತು ಮತ್ತು ತನ್ನನ್ನು ಬಾಲಿವುಡ್‌ಗೆ ಪರಿಚಯಿಸಲು ಟಿ-ಸಿರೀಸ್‌ನ ಮುಖ್ಯಸ್ಥ ಭೂಷಣ್ ಕುಮಾರ್ ನಿರ್ಧರಿಸಿದ್ದರು. ‘ಎ ನ್ಯೂ ಲವ್ಲಿ ಸ್ಟೋರಿ’ ಚಿತ್ರಕ್ಕಾಗಿ ತನ್ನೊಂದಿಗೆ ಕರಾರು ಮಾಡಿಕೊಂಡಿದ್ದ ಅವರು 1,000 ರೂ.ಗಳ ಸೈನಿಂಗ್ ಮೊತ್ತವನ್ನು ನೀಡಿದ್ದರು. ಅದೇ ದಿನ ರಾತ್ರಿ ತನ್ನನ್ನು ಡೇಟಿಂಗ್‌ಗೆ ಆಹ್ವಾನಿಸಿ ಅವರು ಟೆಕ್ಸ್ಟ್ ಸಂದೇಶವನ್ನು ಕಳುಹಿಸಿದ್ದರು. ಅದಕ್ಕೆ,‘ಖಂಡಿತ. ನಾವು ಡಬಲ್ ಡೇಟಿಂಗ್‌ಗೆ ಹೋಗೋಣ. ನೀವು ನಿಮ್ಮ ಪತ್ನಿಯನ್ನು ಕರೆತನ್ನಿ,ನಾನು ನನ್ನ ಬಾಯ್‌ಫ್ರೆಂಡ್‌ನ್ನು ಕರೆತರುತ್ತೇನೆ ’ ಎಂದು ತಾನು ಮರು ಸಂದೇಶ ಕಳುಹಿಸಿದ್ದೆ. ಅದರೆ ನಂತರ ಭೂಷಣ್‌ರಿಂದ ಮತ್ತೆಂದೂ ತನಗೆ ಸಂದೇಶಗಳು ಬರಲಿಲ್ಲ ಎಂದು ನೀಹಾರಿಕಾ ಬರೆದುಕೊಂಡಿದ್ದಾರೆ.

 2009ರಲ್ಲಿ ‘ಮಿಸ್ ಲವ್ಲಿ ’ಚಿತ್ರದ ಚಿತ್ರೀಕರಣದ ವೇಳೆ ನವಾಝುದ್ದೀನ್ ಸಿದ್ದಿಕಿ ಮತ್ತು ನೀಹಾರಿಕಾ ಪರಸ್ಪರ ಹತ್ತಿರವಾಗಿದ್ದರು. ಸಿದ್ದಿಕಿ ಬಗ್ಗೆ ಮೃದು ಭಾವನೆಯನ್ನು ಹೊಂದಿದ್ದ ನಿಹಾರಿಕಾ ಅದೊಂದು ದಿನ ಅವರನ್ನು ತನ್ನ ಮನೆಗೆ ಚಹಾಕ್ಕೆ ಆಹ್ವಾನಿಸಿದ್ದರು. ಆದರೆ ಸಿದ್ದಿಕಿ ಆಕೆಯನ್ನು ಬರಸೆಳೆದು ಅಪ್ಪಿಕೊಂಡಿದ್ದು,ಅದನ್ನು ಪ್ರತಿಭಟಿಸಿದ್ದ ಆಕೆ ಅವರಿಂದ ತಪ್ಪಿಸಿಕೊಂಡಿದ್ದರು. ತಾನು ಮಿಸ್ ಇಂಡಿಯಾ ಅಥವಾ ನಟಿಯನ್ನು ಮದುವೆಯಾಗುವ ಕನಸು ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದ ಸಿದ್ದಿಕಿ,ತನ್ನ ರೂಪ,ಚರ್ಮದ ಬಣ್ಣ ಮತ್ತು ದುರ್ಬಲ ಇಂಗ್ಲಿಷ್‌ನ ಬಗ್ಗೆ ಕೀಳರಿಮೆ ಹೊಂದಿದ್ದರು.

ಇಷ್ಟಾದ ಬಳಿಕವೂ ತಾವಿಬ್ಬರೂ ಡೇಟಿಂಗ್ ಆರಂಭಿಸಿದ್ದೆವು. ಆದರೆ ಸಿದ್ದಿಕಿ ಪದೇಪದೇ ಸುಳ್ಳುಗಳನ್ನು ಹೇಳುತ್ತಿದ್ದರಿಂದ ತಾನು ಅವರೊಂದಿಗೆ ಸಂಬಂಧ ಮುರಿದುಕೊಳ್ಳಲು ನಿರ್ಧರಿಸಿದೆ ಎಂದು ನಿಹಾರಿಕಾ ಹೇಳಿದ್ದಾರೆ.

ಹಲವಾರು ಮಹಿಳೆಯರಿಂದ ಲೈಂಗಿಕ ಕಿರುಕುಳ ದೂರುಗಳ ಬಳಿಕ ‘ಹೌಸ್‌ಫುಲ್ 4’ ಚಿತ್ರದ ನಿರ್ದೇಶನದಿಂದ ಹೊರಬಿದ್ದಿರುವ ಸಾಜಿದ್ ಖಾನ್‌ರನ್ನು ತಾನು ಒಂದೆರಡು ಸಲ ಭೇಟಿಯಾಗಿದ್ದೆ ಎಂದಿರುವ ನಿಹಾರಿಕಾ, ಅವರು ಒಬ್ಬ ಸ್ಯಾಡಿಸ್ಟ್ ಎಂದು ದೂರಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X