ವುಮೆನ್ ಇಂಡಿಯಾ ಮೂಮೆಂಟ್ ದ.ಕ.ಜಿಲ್ಲಾ ಸಮಿತಿ ರಚನೆ
ಮಂಗಳೂರು, ನ.10: ವುಮೆನ್ ಇಂಡಿಯಾ ಮೂಮೆಂಟ್ ದ.ಕ. ಜಿಲ್ಲಾ ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆಯು ಚುನಾವಣೆಯ ಮೂಲಕ 11 ಮಂದಿಯ ಜಿಲ್ಲಾ ಸಮಿತಿ ಮತ್ತು ಜಿಲ್ಲಾ ಪಧಾದಿಕಾರಿಗಳನ್ನು ಆಯ್ಕೆಗೊಳಿಸಲಾಯಿತು.
ನೂತನ ಜಿಲ್ಲಾ ಸಮಿತಿಯ ಅಧ್ಯಕ್ಷೆಯಾಗಿ ನಸ್ರಿಯಾ ಬೆಳ್ಳಾರೆ, ಪ್ರಧಾನ ಕಾರ್ಯದರ್ಶಿ ಝೀನತ್ ಬಂಟ್ವಾಳ, ಉಪಾಧ್ಯಕ್ಷೆ ಯೊಶೋದಾ, ಕಾರ್ಯದರ್ಶಿಗಳಾದ ಫಾತಿಮಾ ನಝ್ರತ್, ಅಡ್ವಕೇಟ್ ರುಬಿಯಾ, ಕೋಶಾಧಿಕಾರಿ ಝುಲೈಖಾ ಬಿ.ಸಿ.ರೋಡ್, ಸಮಿತಿ ಸದಸ್ಯರಾಗಿ ಮರಿಯಮ್ಮಾ ಟಿ.ಎಸ್., ಸಜರಾ ಪುತ್ತೂರು, ಸಹನಾಝ್ ಉಳ್ಳಾಲ, ಸಫಿಯಾ ಬೆಂಗರೆ, ಝಹನಾ ಬಂಟ್ವಾಳ ಆಯ್ಕೆಯಾದರು.
‘ಮಹಿಳಾ ಸಬಲೀಕರಣ ಮತ್ತು ಪ್ರಸಕ್ತ ರಾಜಕೀಯ ಬೆಳವಣಿಗೆ’ಯ ಬಗ್ಗೆ ವುಮೆನ್ ಇಂಡಿಯಾ ಮೂಮೆಂಟ್‌ನ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಮ್ ತರಗತಿ ನಡೆಸಿದರು. ವುಮೆನ್ ಇಂಡಿಯಾ ಮೂಮೆಂಟ್‌ನ ರಾಷ್ಟ್ರೀಯ ಕಾರ್ಯದರ್ಶಿ ಆಯಿಷಾ ಬಜ್ಪೆ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಕಾರ್ಯ ಕ್ರಮದಲ್ಲಿ ನಸ್ರೀಯಾ ಬೆಳ್ಳಾರೆ ಸ್ವಾಗತಿಸಿದರು. ಝೀನತ್ ಬಂಟ್ವಾಳ ವಂದಿಸಿದರು.
Next Story





