ಕತಾರ್: ಕೆ.ಸಿ.ಎಫ್ ವತಿಯಿಂದ ಇಶ್ಖ್ -ಎ- ಮುಸ್ತಫಾ ಕಾನ್ಫರನ್ಸ್

ದೋಹಾ, ನ. 10: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕತಾರ್ ರಾಷ್ಟ್ರೀಯ ಸಮಿತಿಯ ವಯಿಂದ ಇಶ್ಖ್-ಎ-ಮುಸ್ತಫಾ (ಸ.ಅ) ಕಾನ್ಫರನ್ಸ್ ಕಾರ್ಯಕ್ರಮವು ಶುಕ್ರವಾರ ಜುಮಾ ನಮಾಝ್ ಬಳಿಕ ದೋಹಾದಲ್ಲಿ ನಡೆಯಿತು.
ಸ್ವಾಗತ ಸಮಿತಿಯ ಅಧ್ಯಕ್ಷ ಅಬ್ದುಲ್ ರಹ್ಮಾನ್ ಪುಂಜಾಲಕಟ್ಟೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಯ್ಯಿದ್ ಸಅದುದ್ದೀನ್ ತಙಳ್ ಶಿವಮೊಗ್ಗ ಉದ್ಘಾಟಿಸಿದರು. ನೌಫಲ್ ಸಖಾಫಿ ಕಳಸ ಮುಖ್ಯ ಭಾಷಣ ಮಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ದುಆ ಆಶಿರ್ವಚನ ನೀಡಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಹಾಫಿಲ್ ಮುಬಾರಕ್ ಸಖಾಫಿ ಪುಂಜಾಲಕಟ್ಟೆ ನೇತೃತ್ವದಲ್ಲಿ ಮೌಲಿದ್ ಪಾರಾಯಣ ಹಾಗೂ ಮದ್ಹ್ ಆಲಾಪನೆ ನಡೆಯಿತು.
ಅಬ್ದುಲ್ ಜಬ್ಬಾರ್ ಸಅದಿ ಹಂಡುಗುಳಿ, ಹಾಫಿಲ್ ಉಮರುಲ್ ಫಾರೂಖ್ ಸಖಾಫಿ ಎಮ್ಮೆಮಾಡು, ಯೂಸುಫ್ ಸಖಾಫಿ ಅಯ್ಯಂಗೇರಿ, ಕಬೀರ್ ದೇರಳಕಟ್ಟೆ, ಮುನೀರ್ ಮಾಗುಂಡಿ, ಅಂದುಮಾಯಿ ನಾವುಂದ, ನಝೀರ್ ಹಾಜಿ ಕಾಟಿಪಳ್ಳ, ಐ.ಸಿ.ಎಫ್ ನೇತಾರರಾದ ಕೆ.ಬಿ ಅಬ್ದುಲ್ಲಾ ಹಾಜಿ, ಕಡವತ್ತೂರ್ ಅಬ್ದುಲ್ಲಾ ಮುಸ್ಲಿಯಾರ್, ಪಾಡಿ ಅಬ್ದುಲ್ಲಾ ಹಾಜಿ ಮುಂತಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಬ್ದುಲ್ ರಹೀಂ ಸಅದಿ ಪಾಣೆಮಂಗಳೂರು ಸ್ವಾಗತಿಸಿ ಉಮರ್ ಫಾರೂಕ್ ಕೃಷ್ನಾಪುರ ವಂದಿಸಿದರು.







