ಟ್ವೆಂಟಿ-20 ಕ್ರಿಕೆಟ್: ಅಪೂರ್ವ ದಾಖಲೆಯತ್ತ ರೋಹಿತ್

ಚೆನ್ನೈ, ನ.10: ಇತ್ತೀಚೆಗೆ ನಾಲ್ಕು ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಶತಕಗಳನ್ನು ಸಿಡಿಸಿದ್ದ ಏಕೈಕ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದ ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಕೋರರ್ ಎನಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದ್ದಾರೆ.
ಖಾಯಂ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಭಾರತ ತಂಡದ ನಾಯಕತ್ವವಹಿಸಿಕೊಂಡಿರುವ ರೋಹಿತ್ ಶರ್ಮಾ ಟಿ-20 ಕ್ರಿಕೆಟ್‌ನಲ್ಲಿ ಒಟ್ಟು 2,203 ರನ್ ಗಳಿಸಿದ್ದಾರೆ. ಗರಿಷ್ಠ ರನ್ ಕಲೆ ಹಾಕಿರುವ ನ್ಯೂಝಿಲೆಂಡ್‌ನ ಮಾರ್ಟಿನ್ ಗಪ್ಟಿಲ್(2,271)ದಾಖಲೆಯನ್ನು ಮುರಿಯಲು ಇನ್ನು ಕೇವಲ 69 ರನ್ ಅಗತ್ಯವಿದೆ.
ವೆಸ್ಟ್‌ಇಂಡೀಸ್ ವಿರುದ್ಧ ಆಡಿರುವ ಕಳೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರು ಸಹ ಆಟಗಾರ ವಿರಾಟ್ ಕೊಹ್ಲಿ(2,102)ದಾಖಲೆಯನ್ನು ಮುರಿದಿದ್ದರು. ಈ ಮೂಲಕ ಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಕೋರ್ ಗಳಿಸಿರುವ ಭಾರತದ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದರು.
ಪಾಕಿಸ್ತಾನದ ಶುಐಬ್ ಮಲಿಕ್ ಗರಿಷ್ಠ ಟಿ-20 ರನ್ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಮಲಿಕ್ 108 ಪಂದ್ಯಗಳಲ್ಲಿ 2,190 ರನ್ ಗಳಿಸಿದ್ದಾರೆ. ನ್ಯೂಝಿಲೆಂಡ್‌ನ ಬ್ರೆಂಡನ್ ಮೆಕಲಮ್(2,140 ರನ್) ಹಾಗೂ ಕೊಹ್ಲಿ(62 ಪಂದ್ಯ, 2,102 ರನ್)ಕ್ರಮವಾಗಿ 4 ಹಾಗೂ 5ನೇ ಸ್ಥಾನದಲ್ಲಿದ್ದಾರೆ.
ಸುರೇಶ್ ರೈನಾ(1,605), ಎಂಎಸ್ ಧೋನಿ(1,487) ಹಾಗೂ ಯುವರಾಜ್ ಸಿಂಗ್(1,177)ಭಾರತದ ಪರ ಟಿ-20ಯಲ್ಲಿ ಗರಿಷ್ಠ ರನ್ ಗಳಿಸಿದ ಭಾರತದ ಆಟಗಾರರಾಗಿದ್ದಾರೆ.
2ನೇ ಟ್ವೆಂಟಿ-20ಯಲ್ಲಿ 123 ರನ್ ಜೊತೆಯಾಟ ನಡೆಸಿದ್ದ ರೋಹಿತ್ ಹಾಗೂ ಶಿಖರ್ ಧವನ್ ಭಾರತ ತಂಡವನ್ನು ಸುಸ್ಥಿತಿಗೆ ತಲುಪಿಸಿದ್ದರು. 39 ಟಿ-20 ಇನಿಂಗ್ಸ್‌ಗಳಲ್ಲಿ 1,268 ರನ್ ಜೊತೆಯಾಟ ನಡೆಸಿರುವ ರೋಹಿತ್-ಧವನ್ ಅತ್ಯಂತ ಯಶಸ್ವಿ ಜೋಡಿಯಾಗಿದ್ದಾರೆ. ಆಸ್ಟ್ರೇಲಿಯದ ಡೇವಿಡ್ ವಾರ್ನರ್ ಹಾಗೂ ಶೇನ್ ವಾಟ್ಸನ್(37 ಇನಿಂಗ್ಸ್, 1,154 ರನ್)ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.







