ಹುದೈದಾದಲ್ಲಿ ಭೀಕರ ಸಂಘರ್ಷ: ನಾಗರಿಕರು ಸೇರಿ 149 ಮಂದಿ ಹತ
ಹುದೈದಾ (ಯಮನ್), ನ. 12: ಯಮನ್ನ ಸಂಘರ್ಷಪೀಡಿತ ನಗರ ಹುದೈದಾದಲ್ಲಿ ಸರಕಾರಿ ಪಡೆಗಳು ಮತ್ತು ಬಂಡುಕೋರರ ನಡುವೆ ನಡೆದ ಭೀಕರ ಕಾಳಗದಲ್ಲಿ, 24 ಗಂಟೆ ಅವಧಿಯಲ್ಲಿ ನಾಗರಿಕರು ಸೇರಿದಂತೆ ಕನಿಷ್ಠ 149 ಮಂದಿ ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ಮತ್ತು ಸೇನಾ ಮೂಲಗಳು ಸೋಮವಾರ ತಿಳಿಸಿವೆ.
ಮಹತ್ವದ ಬಂದರು ನಗರದಲ್ಲಿ ಏಳು ಮಂದಿ ನಾಗರಿಕರೂ ಮೃತಪಟ್ಟಿದ್ದಾರೆ ಎನ್ನುವುದನ್ನು ಹುದೈದಾದಲ್ಲಿರುವ ಸೇನಾ ಮೂಲವೊಂದು ಖಚಿತಪಡಿಸಿದೆ. ಆದರೆ, ಹೆಚ್ಚಿನ ಮಾಹಿತಿಯನ್ನು ಅವರು ನೀಡಿಲ್ಲ.
ರವಿವಾರ ರಾತ್ರಿ ನಡೆದ ಸಂಘರ್ಷದಲ್ಲಿ 110 ಹೌದಿ ಬಂಡುಕೋರರು ಮತ್ತು 32 ಸರಕಾರಕ್ಕೆ ನಿಷ್ಠೆ ಹೊಂದಿರುವ ಹೋರಾಟಗಾರರು ಮೃತಪಟ್ಟಿದ್ದಾರೆ ಎಂದು ಹುದೈದಾದಾದ್ಯಂತ ಇರುವ ಆಸ್ಪತ್ರೆಗಳ ಅಧಿಕಾರಿಗಳು ಹೇಳಿದ್ದಾರೆ.
Next Story