Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮೀ ಟೂ ಅಭಿಯಾನ: ಬದಲಾಗಬೇಕಿದೆ ಗ್ರಹಿಕೆಯ...

ಮೀ ಟೂ ಅಭಿಯಾನ: ಬದಲಾಗಬೇಕಿದೆ ಗ್ರಹಿಕೆಯ ಸ್ವರೂಪ

-ಡಾ. ಜಗನ್ನಾಥ ಕೆ. ಡಾಂಗೆ-ಡಾ. ಜಗನ್ನಾಥ ಕೆ. ಡಾಂಗೆ12 Nov 2018 11:55 PM IST
share
ಮೀ ಟೂ ಅಭಿಯಾನ: ಬದಲಾಗಬೇಕಿದೆ ಗ್ರಹಿಕೆಯ ಸ್ವರೂಪ

ಅಭಿಯಾನಗಳ ಸ್ವರೂಪವೇ ಬದಲಾವಣೆಯ ಬಯಕೆ, ಅಭಿಯಾನಗಳು ಕಾನೂನಾತ್ಮಕವಾಗಿರಬಹುದು ಹಾಗೂ ಕಾನೂನು ರೂಪಿಸುವ ಪ್ರಕ್ರಿಯೆಗಳಾಗಬಹುದು, ಕಾನೂನುಗಳು ಇದ್ದಾಗ ಅಭಿಯಾನಗಳು ಏಕೆ ಎಂಬ ಪ್ರಶ್ನೆಗಳು ಸಾಕಷ್ಟು ಚರ್ಚೆಯಾಗುತ್ತಿವೆ. ಜನರಿಗೆ ಕಾನೂನುಗಳ ಅರಿವಿಲ್ಲದಿದ್ದಾಗ ಅಭಿಯಾನಗಳು ಅರಿವು ಮೂಡಿಸುತ್ತವೆ ಮತ್ತು ಹಕ್ಕುಗಳನ್ನು ಪಡೆದುಕೊಳ್ಳುವಲ್ಲಿ ಕಾರ್ಯಪ್ರವೃತ್ತರಾಗಲು ಅಣಿಗೊಳಿಸುತ್ತವೆ.

ಭಾರತ ಸರಕಾರ ನಡೆಸುತ್ತಿರುವ ಸ್ವಚ್ಛತಾ ಅಭಿಯಾನಕ್ಕೂ ಮುನ್ನ ಜನರಿಗೆ ಸ್ವಚ್ಛತೆಯ ಕುರಿತು ತಿಳಿದಿತ್ತು ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಪ್ರವರ್ತರಾಗಿದ್ದು ಮಾತ್ರ ಅಭಿಯಾನದಿಂದ. ಅಭಿಯಾನಗಳು ನಮಗೆ ಹಕ್ಕು ಮತ್ತು ಕರ್ತವ್ಯಗಳ ಕುರಿತು ಮನವರಿಕೆ ಮಾಡಿಕೊಡುತ್ತವೆ ಹಾಗೂ ನಾವು ಮಾಡುತ್ತಿರುವ ತಪ್ಪಿನ ಅರಿವನ್ನೂ ಮಾಡಿಸುತ್ತವೆ. ಆತ್ಮಸಾಕ್ಷಿಯನ್ನು ಅಭಿವ್ಯಕ್ತಿಗೊಳಿಸಿ ಮಾಡಿರುವ ತಪ್ಪುಗಳನ್ನು ಒಪ್ಪಿಕೊಳ್ಳುವ ಹಾಗೂ ತಿದ್ದಿಕೊಳ್ಳುವ ಅವಕಾಶ ಕಲ್ಪಿಸುತ್ತವೆ. ತಪ್ಪಿತಸ್ಥರಿಗೆ ಶಿಕ್ಷಿಸುವ ಮತ್ತು ತಪ್ಪು ಮಾಡದಿರುವ ಹಾಗೆ ಜಾಗ್ರತರಾಗುವ ಅವಕಾಶವನ್ನೂ ಸಹ ಒದಗಿಸಿಕೊಡುತ್ತವೆ.

ಭಾರತದಲ್ಲಿ ಪ್ರಚಲಿತವಾಗಿರುವ ಯೋಗ ಅಭಿಯಾನ, ಸ್ವಚ್ಛತಾ ಅಭಿಯಾನ, ಬೇಟಿ ಬಚಾವೋ ಬೇಟಿ ಪಢಾವೋ ಅಭಿಯಾನಗಳು ಪ್ರಪಂಚದಾದ್ಯಂತ ಪ್ರಚಲಿತಗೊಂಡು ಅನೇಕ ದೇಶಗಳಲ್ಲಿ ಚರ್ಚೆಗಳು ನಡೆದು ಆ ದೇಶಗಳ ಪಾಲಿಸಿಗಳನ್ನು ರೂಪಿಸುವಲ್ಲಿ ಸಹಾಯವಾಗುತ್ತಿವೆ. ಹಾಗಾಗಿ ಒಂದು ದೇಶದಲ್ಲಿ ಆರಂಭವಾದ ಅಭಿಯಾನ ಮತ್ತೊಂದು ದೇಶದಲ್ಲಿ ಪ್ರಚಲಿತಗೊಳ್ಳುತ್ತಿರುವುದು ಜಾಗತೀಕರಣದ ವಿಶೇಷ.

ಮೀಟೂ ಅಭಿಯಾನ ಅಮೆರಿಕದಲ್ಲಿ ಶುರುವಾದರೂ ಅದರ ಪ್ರಭಾವ ಹಲವು ದೇಶಗಳಿಗೆ ಹರಡಿಕೊಂಡಿದೆ. ಈ ಅಭಿಯಾನ ಮಹಿಳೆಯರಲ್ಲಿ ಸ್ವಾಭಿಮಾನ ಮತ್ತು ಧೈರ್ಯವನ್ನು ತುಂಬುತ್ತಿದ್ದು, ತಮ್ಮ ಹಕ್ಕುಗಳಿಗೆ ಹೋರಾಟ ಮಾಡುವ ಪ್ರವ್ರತ್ತಿಯನ್ನು ಹುಟ್ಟು ಹಾಕಿ, ಹೋರಾಡುವ ಆತ್ಮ ಸ್ಥೈರ್ಯ ಬಲಗೊಳ್ಳುತ್ತಿದೆ. ಮೀ.ಟೂ ಎನ್ನುವುದು ನೋವಿನ ಹೇಳಿಕೆ, ಹಿಂಸೆಗೊಳಗಾದ ಮನಸ್ಸಿನ ವೇದನೆ ಹಾಗೂ ಮಡುಗಟ್ಟಿದ ನೋವಿನ ಕೂಗು. ಈ ವೇದಿಕೆಯಡಿಯಲ್ಲಿ ಸಾಕಷ್ಟು ಪುರುಷರು ಹಾಗೂ ಮಹಿಳೆಯರು ತಮ್ಮ ಪರ ಅಥವಾ ವಿರೋಧದ ನಿಲುವನ್ನು ವ್ಯಕ್ತಪಡಿಸುವ ವಾಕ್ ಸ್ವಾತಂತ್ರವನ್ನು ಬಳಸಿಕೊಳ್ಳುವ ಹಾಗಾಗಿದೆ. ಅಷ್ಟೆ ಅಲ್ಲದೇ ಎಷ್ಟೋ ಜನ ಮಾತನಾಡುವ ಈ ಉಸಾಬರಿ ನಮಗ್ಯಾಕೆ ಎನ್ನುವ ಹಾಗೆ ಮೌನಿಗಳಾಗಿರುವುದು ಕಂಡು ಬರುತ್ತಿದೆ.

‘ಮೀ ಟೂ’ ಅಭಿಯಾನ ಸ್ವಚ್ಛ ಭಾರತದ ಅಭಿಯಾನದ ಭಾಗವಾಗಿಯೇ ನಾವು ಏಕೆ ನೋಡಬಾರದು ಎನ್ನುವುದೊಂದು ಆತ್ಮಾವಲೋಕನದ ಸಂಗತಿ. ಈ ಅಭಿಯಾನದಡಿಯಲ್ಲಿ ಮನಸ್ಸಿನ, ಭಾವನೆಗಳ ಮತ್ತು ವ್ಯಕ್ತಿಯ ವ್ಯಕ್ತಿತ್ವದ ಸ್ವಚ್ಛತೆಗೆ ಸಂಬಂಧಿಸಿದ ಅಭಿಯಾನವಾಗಿ ಹೊರಹೊಮ್ಮುತ್ತಿರುವುದಷ್ಟೆ ಅಲ್ಲದೆ ಎಲ್ಲರೂ ತಮ್ಮ ಬಾಹ್ಯ ಪರಿಸರವಷ್ಟೇ ಅಲ್ಲದೆ ಆಂತರಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಇದರ ಭಾಗವಾಗಿದೆ ಹಾಗೂ ಅದನ್ನು ಪರಿಗಣಿಸುವ ಅವಶ್ಯಕತೆ ಎದ್ದು ಕಾಣುತ್ತಿದೆ.

ಮಹಿಳೆಯರ ಮೇಲಿನ ದೌರ್ಜನ್ಯಗಳು, ಅಪಹರಣಗಳು, ಅತ್ಯಾಚಾರಗಳು ವರ್ಷದಿಂದ ವರ್ಷಕ್ಕೆ ಎಲ್ಲಾ ರಂಗಗಳಲ್ಲೂ ಹೆಚ್ಚುತ್ತಿವೆ, ಪ್ರತಿಷ್ಠಿತ ಐ.ಟಿ. ಸಂಸ್ಥೆಗಳಲ್ಲಿ ನೀಡುವ ಲೈಂಗಿಕ ಕಿರುಕುಳಗಳೂ ಇದಕ್ಕೆ ಹೊರತಾಗಿಲ್ಲ. ಥಾಮ್ಸನ್ ರಾಯಟರ್ಸ್‌ ಪ್ರತಿಷ್ಠಾನ ಸಮೀಕ್ಷೆಯ 2017ರ ಪ್ರಕಾರ ಹೆಣ್ಣು ಮಕ್ಕಳಿಗೆ ಭಾರತದಲ್ಲೇ ಹೆಚ್ಚು ಅಪಾಯ ಎಂದು ತಿಳಿಸಿದೆ. ಹೀಗಿರುವಾಗ ಒಬ್ಬ ವ್ಯಕ್ತಿಯ ಅನುಭವ ಇನ್ನೊಬ್ಬರಿಗೆ ಸ್ಫೂರ್ತಿ, ಅರಿವು ಮತ್ತು ಎಚ್ಚರಿಕೆಯಾಗಬಲ್ಲದು. ಪ್ರತಿಯೊಬ್ಬ ವ್ಯಕ್ತಿಯು ಬೇರೆಯವರ ಅನುಭವಗಳಿಂದಲೂ ಪ್ರೇರಿತನಾಗುತ್ತಾನೆ ಮತ್ತು ಕಲಿಯುತ್ತಾನೆ. ಮಹಾತ್ಮಾ ಗಾಂಧೀಜಿ ‘‘ನನ್ನ ಜೀವನವೇ ನನ್ನ ಸಂದೇಶ’’, ಹೇಳಿರುವ ಹಾಗೆಯೇ ಎಲ್ಲರ ಜೀವನವೂ ಎಲ್ಲರಿಗೂ ಸಂದೇಶವಾದರೆ ಇಡಿ ಮನುಷ್ಯಕುಲಕ್ಕೆ ಅನುಕೂಲ ತಾನೇ. ಕಾನೂನಾತ್ಮಕ ನಿರ್ಣಯಗಳೇನೇ ಬಂದರೂ, ಶಿಕ್ಷೆ ಯಾವ ಪ್ರಮಾಣದಲ್ಲಿ ನೀಡಿದರೂ ಒಂದಂತೂ ಸತ್ಯ, ಎಲ್ಲಾ ಗಂಡಸರೂ ಹೆಣ್ಣುಮಕ್ಕಳನ್ನು ಕಾಣುವ ಮತ್ತು ಅವರೊಂದಿಗೆ ವರ್ತಿಸುವ ರೀತಿಯಲ್ಲಿ ಬದಲಾವಣೆ ಬರುವುದಂತೂ ಖಂಡಿತ. ಈ ಅಭಿಯಾನವು ಎಲ್ಲಾ ಪುರುಷರಲ್ಲಿ ಅರಿವು, ಭಯ ಮತ್ತು ಒಂದಿಷ್ಟು ಆತಂಕವನ್ನಂತೂ ಮೂಡಿಸಿರುವುದು ನಿಸ್ಸಂದೇಹ. ಹಾಗೆಯೇ ಹೆಣ್ಣಿಗೊಂದು ಅತೀ ಮಹತ್ವದ ವೇದಿಕೆ ದೊರಕಿದಂತಾಗಿದೆ.

ಈ ತರಹದ ಅಭಿಯಾನಗಳು ಎಲ್ಲಾ ರಂಗಗಳಿಗೂ ವಿಸ್ತರಿಸುವ ಅವಶ್ಯಕತೆ ಇದೆ, ಉದಾಹರಣೆಗೆ, ರಾಜಕೀಯ, ಕ್ರೀಡೆ, ಜಾತಿ, ಧರ್ಮ, ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ನಡೆಯುತ್ತಿರುವ ದೌರ್ಜನ್ಯ, ದಿನಗೂಲಿ ನೌಕರರ, ಪೌರಕಾರ್ಮಿಕರ ಮೇಲೆ ನಡೆಯುವ ದೌರ್ಜನ್ಯ, ಲಂಚ, ವರದಕ್ಷಿಣೆ, ನೋಟಿಗಾಗಿ ವೋಟು ಮತ್ತು ತೆರಿಗೆ ವಂಚನೆಯಂತಹ ಇತರ ಅಭಿಯಾನಗಳು.

ಡಾ.ಬಿ.ಆರ್.ಅಂಬೇಡ್ಕರ್ ಪ್ರಕಾರ ಮಹಿಳೆಯೊಬ್ಬಳು ಸಾಧಿಸಿದ ಸಾಧನೆಯ ಮೇಲೆ ಸಮುದಾಯದ ಅಭಿವೃದ್ಧ್ದಿಯನ್ನು ಅಳೆಯಬಹುದು. ಅಭಿಯಾನಗಳು ಸಮಾಜವನ್ನು ಗಟ್ಟಿಗೊಳಿಸಬೇಕೇ ಹೊರತು ಛಿದ್ರಗೊಳಿಸಬಾರದು. ಸಮಾಜದ ಸ್ವಾಸ್ಥ್ಯ ಕಾಪಾಡುವ ಹಾಗಿರಬೇಕು ಹಾಗೆಯೇ, ಎಲ್ಲರಲ್ಲೂ ಸಮಾನ ಭಾವನೆ ಮತ್ತು ಗೌರವ ಮೂಡಿಸಬೇಕು. ಆದ್ದರಿಂದ ಸತ್ಯವನ್ನಾಧರಿಸಿದ ದೌರ್ಜನ್ಯಗಳನ್ನೇ ಈ ಅಭಿಯಾನದಡಿಯಲ್ಲಿ ನೊಂದವರು ಹೊರಹಾಕಬೇಕಿದೆ. ಹೆಣ್ಣನ್ನು ಗೌರವಿಸುವ, ಸ್ವಾಭಿಮಾನ ಹಾಗೂಆತ್ಮಗೌರವವನ್ನು ಬೆಳೆಸುವಂತಹ ಶಿಕ್ಷಣ ಈ ಕಾಲದ ಅವಶ್ಯಕವೆನ್ನುವುದನ್ನು ನಾವೆಲ್ಲರೂ ಅರಿಯಬೇಕಿದೆ,

share
-ಡಾ. ಜಗನ್ನಾಥ ಕೆ. ಡಾಂಗೆ
-ಡಾ. ಜಗನ್ನಾಥ ಕೆ. ಡಾಂಗೆ
Next Story
X