ನ.16ರಿಂದ ಮುಲ್ಕಿ ಶಾಪಿ ಜುಮಾ ಮಸೀದಿಯಲ್ಲಿ ಮೀಲಾದ್ ಕಾರ್ಯಕ್ರಮ
ಮುಲ್ಕಿ, ನ. 13: ಪ್ರವಾದಿ ಮುಹಮ್ಮದ್ (ಸ ಅ) ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಮುಲ್ಕಿ ಶಾಫಿ ಕೇಂದ್ರ ಮಸೀದಿ ಆಶ್ರಯದಲ್ಲಿ ನ.16ರಿಂದ 20 ರತನಕ ಮೀಲಾದ್ ಆಚರಣೆ ನಡೆಯಲಿದೆ.
ಕಾರ್ನಾಡ್ ನೂರಿಯ್ಯಾ ಮಸೀದಿಯ ವಠಾರದಲ್ಲಿ ಜಮಾಅತ್ ಅಧ್ಯಕ್ಷ ಇಕ್ಬಾಲ್ ಅಹ್ಮದ್ ಅಧ್ಯಕ್ಷತೆ ವಹಿಸುವರು. ಕೇಂದ್ರ ಮಸೀದಿಯ ಖತೀಬ್ ಎಸ್ ಬಿ ದಾರಿಮಿ ದುಹಾಶೀರ್ವಚನ ನಡೆಸಲಿದ್ದಾರೆ. ಸ್ಥಳೀಯ ಖತೀಬ್ ಇಸ್ಮಾಯಿಲ್ ದಾರಿಮಿ ಉದ್ಘಾಟಿಸಲಿದ್ದಾರೆ.
ಕೊನೆಯ ಎರಡು ದಿನಗಳಲ್ಲಿ ಮುಲ್ಕಿ ಕೇಂದ್ರ ಜುಮಾ ಮಸೀದಿಯ ವಠಾರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಾಗ್ಮಿ ಅಹ್ಮದ್ ನಹೀಂ ಪೈಝಾಬಾದ್ ಮುಖ್ಯ ಭಾಷಣಗೈಯ್ಯಲಿದ್ದಾರೆ. ಮದ್ರಸ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು, ಮೀಲಾದ್ ಜಾಥಾ ಹಾಗೂ ಅನ್ನದಾನ ನಡೆಯಲಿದೆ ಎಂದು ಜಮಾಅತ್ ಕಾರ್ಯದರ್ಶಿ ಲಿಯಾಕತ್ ಅಲಿ ತಿಳಿಸಿದ್ದಾರೆ.
Next Story