ಮಂಗಳೂರು: ವಾಹನಗಳಿಗೆ ‘ಟಿಂಟ್’ ಬಳಕೆ ವಿರುದ್ಧ ಸಂಚಾರ ಪೊಲೀಸರ ಕಾರ್ಯಾಚರಣೆ
20 ವಾಹನಗಳ ಟಿಂಟ್ ತೆರವು
ಮಂಗಳೂರು, ನ.13: ನಗರದಲ್ಲಿ ಕಾನೂನು ಬಾಹಿರವಾಗಿ ವಾಹನಗಳಿಗೆ ಟಿಂಟ್ ಬಳಕೆ ಮಾಡಿದ ವಾಹನಗಳ ವಿರುದ್ಧ ನಗರ ಸಂಚಾರ ಪೊಲೀಸರು ಕಾರ್ಯಾಚರಣೆ ನಡೆಸಿ 20 ವಾಹನಗಳ ಟಿಂಟ್ ತೆರವು ಮಾಡಿದ್ದಾರೆ.
ನಗರ ಸಂಚಾರ ಅಧಿಕಾರಿ ಮತ್ತು ಸಿಬ್ಬಂದಿ ಸಂಚಾರ ಎಸಿಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಸನ್ ಫಿಲ್ಮ್ ಅಳವಡಿಸಿದ ವಾಹನಗಳನ್ನು ವಿಶೇಷ ಕಾರ್ಯಾಚರಣೆ ನಡೆಸಲಾಯಿತು. ಈ ಸಂದರ್ಭ ಟಿಂಟ್ ಬಳಸಿದ 20 ವಾಹನಗಳನ್ನು ಗುರುತಿಸಿ ಟಿಂಟ್ಗಳನ್ನು ಪೊಲೀಸರೇ ತೆರವು ಮಾಡಿದರು.
ಟಿಂಟ್ ಬಳಕೆ ಮಾಡಿದ ವಾಹನಗಳು ಪತ್ತೆಯಾದರೆ ಈ ಹಿಂದೆ 100 ರೂ. ದಂಡ ವಿಧಿಸಲಾಗುತ್ತಿದೆ. ಆದರೆ ವಾಹನದಲ್ಲಿ ಟಿಂಟ್ ಬಳಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಟಿಂಟ್ ತೆರವು ಮಾಡಿದ್ದಾರೆ.
Next Story