ಬಂಟ್ವಾಳ: ನ. 17, 18ರಂದು "ಮಿಂಚಿನ ನೋಂದಣಿ" ಕಾರ್ಯಕ್ರಮ
ಬಂಟ್ವಾಳ, ನ. 13: ಬಂಟ್ವಾಳ ತಾಲೂಕಿನ ಎಲ್ಲ ಮತಗಟ್ಟೆ ವ್ಯಾಪ್ತಿಯಲ್ಲಿ ಯುವ ಮತ್ತು ಬಿಟ್ಟುಹೋದ ಮತದಾರರನ್ನು ನೋಂದಾಯಿಸಲು ನ. 17 ಮತ್ತು 18ರಂದು "ಮಿಂಚಿನ ನೋಂದಣಿ" ಕಾರ್ಯಕ್ರಮವು ಬಂಟ್ವಾಳ ತಾಲೂಕಿನ ಎಲ್ಲ ಮತಗಟ್ಟೆ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಗ್ಗೆ 10ರಿಂದ ಸಂಜೆ 5.30ವರೆಗೆ ಎಲ್ಲ ಬೂತ್ ಮಟ್ಟದ ಅಧಿಕಾರಿಗಳು ಹಾಜರಿದ್ದು, 2019 ಜ.1ಕ್ಕೆ 18 ವರ್ಷ ಪ್ರಾಯ ತುಂಬಿದ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸದೇ ಇರುವವರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





